ನನ್ನ ಬುದ್ಧಿವಂತಿಕೆ ಮತ್ತು ಹಿರಿತನ ಗಮನಿಸಿ ಸಚಿವ ಸ್ಥಾನ ನೀಡಲೇಬೇಕು: ಎನ್ ವೈ ಗೋಪಾಲಕೃಷ್ಣ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ

Updated on: May 31, 2025 | 10:35 AM

ಶಾಸಕನಾದರೆ ಕೇವಲ ಸಣ್ಣಪುಟ್ಟ ಕೆಲಸಗಳನ್ನು ಮಾತ್ರ ಮಾಡಲು ಅವಕಾಶವಿರುತ್ತದೆ, ಆದರೆ ಮಂತ್ರಿ ಸ್ಥಾನ ಒದಗಿಸುವ ಅವಕಾಶಗಳು ಜಾಸ್ತಿಯಿರುತ್ತವೆ, ಸಚಿವ ಸಂಪುಟ ಪುನಾರಚನೆಗಾಗಿ ಕಾಯ್ತಾ ಇದ್ದೇನೆ, ಹೈಕಮಾಂಡ್ ನನ್ನ ಬುದ್ಧಿವಂತಿಕೆ ಮತ್ತು ಸೀನಿಯಾರಿಟಿ ಗಮನಕ್ಕೆ ತಂದುಕೊಂಡು ಸಚಿವ ಸ್ಥಾನ ನೀಡಿದರೆ ಸರಿ, ಇಲ್ಲದಿದ್ದರೆ ಶಾಸಕನಾಗಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಂಡಿರುತ್ತೇನೆ ಎಂದು ಗೋಪಾಲಕೃಷ್ಣ ಹೇಳಿದರು.

ಚಿತ್ರದುರ್ಗ, ಮೇ 31: ಮೊಳಕಾಲ್ಮೂರು ಕ್ಷೇತ್ರರ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೂ ಮಂತ್ರಿಯಾಗುವಾಸೆ. ತಮ್ಮ ಕ್ಷೇತ್ರದ ನಾಯಕನಹಟ್ಟಿಯಲ್ಲಿ ಕಟ್ಟಡವೊಂದರ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತಾಡಿರುವ ಅವರು ಏಳು ಬಾರಿ ಶಾಸಕನಾಗಿರುವ ತನ್ನ ಹಿರಿತನವನ್ನು ಗಮನಿಸಿ ಸಚಿವ ಸ್ಥಾನ ನೀಡಬೇಕೆಂದು ಅವರು ಹೇಳಿದರು. ನನ್ನ ಸಾಮರ್ಥ್ಯ, ಕ್ಷಮತೆ ಮತ್ತು ಯೋಗ್ಯತೆ ಹೈಕಮಾಂಡ್​ಗೆ ಗೊತ್ತಿದೆ, ನನ್ನನ್ನು ಆಯ್ಕೆ ಮಾಡುವ ಜನ ಮಂತ್ರಿಯಾಗಿ ಕೆಲಸ ಮಾಡುವುದನ್ನು ನೋಡಲು ಉತ್ಸುಕರಾಗಿದ್ದಾರೆ, ಮೂರನೇ ಸಲ ಶಾಸಕನಾಗಿ ಆಯ್ಕೆಯಾದರೆ ಮಂತ್ರಿ ಮಾಡುವ ಪರಿಪಾಠ ಮಾಯವಾಗಿರುವುದಕ್ಕೆ ಬೇಸರವಿದೆ ಎಂದು ಶಾಸಕ ಹೇಳಿದರು.

ಇದನ್ನೂ ಓದಿ:   ಕುರ್ಚಿ ಕಚ್ಚಾಟ ಮಧ್ಯೆ ಮತ್ತೆ ಸಚಿವರ ದೆಹಲಿಯಾತ್ರೆ: ಕೆಲವರಿಗೆ ಕಾಂಗ್ರೆಸ್​ ಹೈಕಮಾಂಡ್​ನಿಂದ ಬುಲಾವ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.