DK Shivakumar DA Case; ಚಾರ್ಜ್​ ಶೀಟ್ ಸಲ್ಲಿಸುವ ಹಂತದಲ್ಲಿ ಶಿವಕುಮಾರ್ ಡಿಎ ಪ್ರಕರಣವನ್ನು ಹಿಂಪಡೆದಿ​ದ್ದು ದುರ್ದೈವದ ಸಂಗತಿ: ಪ್ರಲ್ಹಾದ್ ಜೋಶಿ

|

Updated on: Nov 24, 2023 | 1:47 PM

DK Shivakumar DA Case: ರಾಜ್ಯ ಸರ್ಕಾರ ಗೊಂದಲದ ಗೂಡಾಗಿದೆ, ಸಚಿವ ಸಂಪುಟದ ಸದಸ್ಯರ ನಡುವೆ ಸಮನ್ವಯತೆ, ಹೊಂದಾಣಿಕೆ ಇಲ್ಲದಿರೋದು ಆಡಳಿತದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಪ್ರಲ್ಹಾದ್ ಜೋಶಿ ಹೇಳುತ್ತಾರೆ. ಜಾತಿ ಗಣತಿ ಮತ್ತು ಜನಗಣತಿ ನಡೆಸಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ, ರಾಜ್ಯ ಸರ್ಕಾರಗಳನ್ನು ಆದನ್ನು ಮಾಡಿದರೆ ಸಮೀಕ್ಷೆ ಅನಿಸಿಕೊಳ್ಳುತ್ತದೆ ಗಣತಿ ಅಲ್ಲ ಎಂದು ಅವರು ಹೇಳುತ್ತಾರೆ.

ಹುಬ್ಬಳ್ಳಿ: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ಡಿಕೆ ಶಿವಕುಮಾರ್ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ (DK Shivakumar DA Case) ರಾಜ್ಯ ಸರ್ಕಾರ ಸಿಬಿಐ ತನಿಖೆಯನ್ನು ಹಿಂಪಡೆದಿದ್ದು ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿಯೂ ಸರಿಯಲ್ಲ ಎಂದು ಹೇಳಿದರು. ಸಿಬಿಐ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುವ ಹಂತದಲ್ಲಿ ಸಿದ್ದರಾಮಯ್ಯ ಸರ್ಕಾರ (Siddaramaiah government) ನಿರ್ಧಾರ ತೆಗೆದುಕೊಂಡಿರುವುದು ಅತ್ಯಂತ ದುರ್ದೈವದ ಸಂಗತಿ ಎಂದು ಹೇಳಿದ ಅವರು ನಮ್ಮ ದೇಶದ ನ್ಯಾಯಾಲಯಗಳು, ಕೇಂದ್ರ ಸರ್ಕಾರದ ನಿರ್ಣಯಗಳಿಗೆ ವ್ಯತಿರಿಕ್ತವಾದ ತೀರ್ಪುಗಳನ್ನು ನೀಡಿರುವ ಹಲವಾರು ಉದಾಹರಣೆಗಳಿವೆ, ಅದರರ್ಥ ದೇಶದ ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿದೆ ಮತ್ತು ನಿಷ್ಪಕ್ಷಪಾತವಾಗಿದೆ ಎಂದರು. ಸರ್ಕಾರದ ನಿರ್ಧಾರವನ್ನು ಕೋರ್ಟ್ ತಿರಸ್ಕರಿಸುವ ಸಾಧ್ಯತೆಯೇ ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 24, 2023 01:16 PM