ಜಗತ್ತೇ ಶ್ಲಾಘಿಸುತ್ತಿರುವ ನಾರಿಶಕ್ತಿ ವಂದನ್ ಅಧಿನಿಯಮ ರಾಹುಲ್ ಗಾಂಧಿಗೆ ಅರ್ಥವೇ ಆಗಿಲ್ಲ: ಪ್ರಲ್ಹಾದ್ ಜೋಶಿ ವ್ಯಂಗ್ಯ
women reservation bill; ಈ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಗತ್ತಿನ ಅನೇಕ ರಾಷ್ಟ್ರಗಳು ಶ್ಲಾಘಿಸುತ್ತಿವೆ. ಇದಕ್ಕೆ ದೃಷ್ಟಾಂತವೆಂದರೆ ನಿನ್ನೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಕೊಠಡಿಗೆ ಬಂದ ವಿದೇಶ ನಿಯೋಗ ಮಹಿಳಾ ಮೀಸಲಾತಿ ವಿಧೇಯಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಮಹತ್ಕಾರ್ಯವನ್ನ ನರೇಂದ್ರ ಮೋದಿಯವರು ಮಾತ್ರ ಮಾಡಲು ಸಾಧ್ಯ ಎಂದಿದೆ ಎಂಬುದಾಗಿ ಜೋಶಿ ಹೇಳಿದರು
ಹುಬ್ಬಳ್ಳಿ, ಸೆಪ್ಟೆಂಬರ್ 22: ನಾರಿಶಕ್ತಿ ವಂದನ್ ಅಧಿನಿಯಮದ (Nari Shakti Vandan Adhiniyam) ಪ್ರತಿಯನ್ನು ಓದದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾರೋ ಹೇಳಿದ್ದನ್ನು ಕೇಳಿಕೊಂಡು ರಾಜಕೀಯ ಟೀಕೆ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ವಾಗ್ದಾಳಿ ನಡೆಸಿದರು. ಧಾರವಾಡದಲ್ಲಿ ಮಾತನಾಡಿದ ಅವರು, ನಾರಿಶಕ್ತಿ ವಂದನ್ (women reservation bill) ಕಾಯ್ದೆಯಲ್ಲಿ ಸಂಪೂರ್ಣ ಸ್ಪಷ್ಟತೆ ಇದೆ. ಈ ಕಾಯ್ದೆಯು ವಾಸ್ತವದಲ್ಲಿ ಜಾರಿ ಆಗೋದ್ರಲ್ಲಿ ಯಾವ ಸಂಶಯವೂ ಇಲ್ಲ. ಆದರೂ ರಾಹುಲ್ ಗಾಂಧಿ ಮಾತ್ರ ಯಾಕೆ ಹೀಗೆ ಟೀಕೆ ಮಾಡ್ತಾರೆ ಅಂದ್ರೆ, ಅವರು ಸ್ವತಃ ಕಾಯ್ದೆಯ ಪ್ರತಿ ಓದುವುದಿಲ್ಲ. ಯಾರೋ ಟ್ವೀಟ್ ಮಾಡಿದ್ದನ್ನ ನೋಡಿಕೊಂಡು ಮಾತಾಡ್ತಾರೆ ಎಂದರು.
ಈ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಗತ್ತಿನ ಅನೇಕ ರಾಷ್ಟ್ರಗಳು ಶ್ಲಾಘಿಸುತ್ತಿವೆ. ಇದಕ್ಕೆ ದೃಷ್ಟಾಂತವೆಂದರೆ ನಿನ್ನೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಕೊಠಡಿಗೆ ಬಂದ ವಿದೇಶ ನಿಯೋಗ ಮಹಿಳಾ ಮೀಸಲಾತಿ ವಿಧೇಯಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಮಹತ್ಕಾರ್ಯವನ್ನ ನರೇಂದ್ರ ಮೋದಿಯವರು ಮಾತ್ರ ಮಾಡಲು ಸಾಧ್ಯ ಎಂದರು. ಆದರೆ ರಾಹುಲ್ ಗಾಂಧಿಗೆ ಇದ್ಯಾವುದೂ ಅರ್ಥವೇ ಆಗಲ್ಲ ಅಂತ ಜೋಶಿ ವ್ಯಂಗ್ಯವಾಡಿದರು.
ಇದನ್ನೂ ಓದಿ: Womens Reservation Bill; ಐತಿಹಾಸಿಕ ಮಹಿಳಾ ಮೀಸಲಾತಿ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಸರ್ವಾನುಮತದ ಅನುಮೋದನೆ
ನಾರಿ ಶಕ್ತಿ ವಂದನ್ ಅಧಿನಿಯಮದಿಂದಾಗಿ ಕರ್ನಾಟಕ ವಿಧಾನಸಭೆಗೆ ಕನಿಷ್ಠವೆಂದರೂ 66 ಮಹಿಳೆಯರು ಸದಸ್ಯರಾಗಿ ಬರಲಿದ್ದಾರೆ. ಪ್ರಧಾನಮಂತ್ರಿಯವರ ಈ ದೂರದರ್ಶಿ ನಾಯಕತ್ವಕ್ಕೆ, ಉದಾತ್ತ ಚಿಂತನೆಗೆ, ರಾಜಕೀಯ ಇಚ್ಛಾಶಕ್ತಿಗೆ ದೇಶ, ರಾಜ್ಯ ಹಾಗೂ ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದ ಸಮಸ್ತರ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಜೋಶಿ ಹೇಳಿದರು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಸ್ಥಾನಗಳನ್ನು ನೀಡುವ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆಯಲ್ಲಿಯೂ ಗುರುವಾರ ರಾತ್ರಿ ಸರ್ವಾನುಮತದಿಂದ ಅನುಮೋದನೆ ದೊರೆತಿತ್ತು. ವಿಧೇಯಕದ ಪರ 215 ಸಂಸದರು ಮತ ಚಲಾಯಿಸಿದರೆ, ವಿರುದ್ಧ ಯಾವೊಬ್ಬ ಸಂಸದನೂ ಮತ ಚಲಾಯಿಸಿರಲಿಲ್ಲ. ಬುಧವಾರವಷ್ಟೇ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕರಿಸಲಾಗಿತ್ತು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ