ತನಿಖೆಯ ಆದೇಶ ಹಿಂಪಡೆದಿದ್ದು ಕಾನೂನುಬಾಹಿರ, ನ್ಯಾಯಾಲಯದಲ್ಲಿ ಶಿವಕುಮಾರ್ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಕೆ ಶಿವಕುಮಾರ್ ಅವರ ಅಕ್ರಮ ಆದಾಯಕ್ಕೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತನಿಖೆಗೆ ಆದೇಶ ನೀಡಿದ್ದನ್ನು ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿಂಪಡೆಯ ರಾಜ್ಯ ಉಚ್ಚ ನ್ಯಾಯಾಲಯ ಅನುಮತಿ ನೀಡಿದ್ದು ಶಿವಕುಮಾರ್ ಜೊತೆ ಸರ್ಕಾರಕ್ಕೂ ನಿರಾಳವಾಗಿಸಿದೆ.
ಶಿವಮೊಗ್ಗ: ಇಂದು ಶಿವಮೊಗ್ಗದಲ್ಲಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ಡಿಕೆ ಶಿವಕುಮಾರ್ (DK Shivakumar) ಅವರಿಗೆ ಅಕ್ರಮ ಗಳಿಕೆ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಾಗ ಬಿಎಸ್ ಯಡಿಯೂರಪ್ಪನವರ (BS Yediyurappa) ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಆದೇಶವನ್ನು ಸಮರ್ಥಿಸಿಕೊಂಡರು. ಜಾರಿ ನೀರ್ದೇಶನಾಲಯದ ವರದಿ ಮತ್ತು ಕೋರಿಕೆ ಮೇರೆಗೆ ಶಿವಕುಮಾರ್ ಪ್ರಕರಣವನ್ನು ಸಿಬಿಯ ತನಿಖೆಗೆ ಯಡಿಯೂರಪ್ಪ ಸರ್ಕಾರ ಒಪ್ಪಿಸಿತ್ತು. ಆದರೆ ಆ ಸರ್ಕಾರದ ಆದೇಶವನ್ನು ಸಿದ್ದರಾಮಯ್ಯ ಸರ್ಕಾರ ಹಿಂಪಡೆದಿದ್ದು ಕಾನೂನುಬಾಹಿರ ಎಂದ ವಿಜಯೇಂದ್ರ ಕೋರ್ಟ್ ನಲ್ಲಿ ಸರ್ಕಾರದ ವಾದಕ್ಕೆ ಜಯ ಸಿಕ್ಕಲ್ಲ ಎಂದು ಹೇಳಿದರು. ಶಿವಕುಮಾರ್ ತಪ್ಪಿತಸ್ಥ ಅಥವಾ ಅಪರಾಧಿ ಅಂತ ತಾನು ಹೇಳುತ್ತಿಲ್ಲ ಆದರೆ ಅವರು ನ್ಯಾಯಾಲಯದಲ್ಲಿ ಅವರು ಹೋರಾಡಿ ತಾನು ನಿರಪರಾಧಿ ಅಂತ ಸಾಬೀತು ಮಾಡಲಿ ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ