ನೋಟೀಸಲ್ಲ ಗೆಜೆಟ್ ನೋಟಿಫಿಕೇಶನ್​ನನ್ನು ಸಿದ್ದರಾಮಯ್ಯ ವಾಪಸ್ಸು ಪಡೆಯಬೇಕು: ಪ್ರತಾಪ್ ಸಿಂಹ

|

Updated on: Nov 04, 2024 | 3:05 PM

ಸಿಎಂ ತನ್ನನ್ನು ಕೋಮುವಾದಿ ಎಂದರೆ ಚಿಂತೆ ಇಲ್ಲ, ಬೇರೆ ದೇಶಗಳ ಮೇಲೆ ಅತಿಕ್ರಮಣ ನಡೆಸಿ ಅಲ್ಲಿನ ಸಂಸ್ಕೃತಿಗಳನ್ನು ಹಾಳು ಮಾಡಿದ ಮತ್ತು ಮನೆತುಂಬ ಮಕ್ಕಳನ್ನು ಹುಟ್ಟಿಸುವ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಸೇರಿದ ವ್ಯಕ್ತಿ ತಾನಲ್ಲ, ತನ್ನದು ಹಿಂದೂ ಸಂಸ್ಕೃತಿ ಎಂದು ಪ್ರತಾಪ್ ಸಿಂಹ ಹೇಳಿದರು.

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿನಿಂದಲೂ ಮುಸಲ್ಮಾನರನ್ನು ಓಲೈಸುವ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ, ಅವರು ಮುಸಲ್ಮಾನರ ಪರ ಅಲ್ಲದೆ ಹೋಗಿದ್ದರೆ ಹುಬ್ಬಳ್ಳಿಯಲ್ಲಿ ಪೊಲೀಸರ ವಾಹನವನ್ನು ಜಖಂಗೊಳಿಸಿದ ಕೇಸನ್ನು ಸಿದ್ದರಾಮಯ್ಯ ವಾಪಸ್ಸು ಪಡೆಯುತ್ತಿರಲಿಲ್ಲ ಎಂದು ಶಿಗ್ಗಾವಿಯಲ್ಲಿ ರೈತರ ಪರ ಪ್ರತಿಭಟನೆ ಮಾಡುತ್ತಾ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. ಕೇವಲ ನೋಟೀಸ್ ವಾಪಸ್ಸು ಪಡೆದರೆ ಏನೂ ಅಗಲ್ಲ, ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಬೇಕು ಎಂದು ಪ್ರತಾಪ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಾರದೋ ಹೆಣ ತಂದು ಹೂತು ನಮ್ಮದು ಎನ್ನುತ್ತಾರೆ: ವಕ್ಫ್ ಆಸ್ತಿ ವಿಚಾರವಾಗಿ ಪ್ರತಾಪ್ ಸಿಂಹ ವಾಗ್ದಾಳಿ