2 ಮಕ್ಕಳ ಜೊತೆ ಜೀವ ಬಿಟ್ಟ ತಾಯಿ: ಈ ಹೃದಯ ವಿದ್ರಾವಕ ಘಟನೆಗೆ ಕಾರಣವೇನು?

Edited By:

Updated on: Sep 21, 2025 | 9:07 PM

ಮಹಿಳೆ ತನ್ನ ಎರಡು ಮಕ್ಕಳ ಜೊತೆ ಸೇರಿ ತಾನು ಕೂಡ ಜೀವ ಬಿಟ್ಟಿದ್ದಾಳೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಡಪಲಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಪತಿಯ ಅಜ್ಜಿ ಕಿರುಕುಳದಿಂದ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಕಡಪಲಕೆರೆ ಗ್ರಾಮದ ಸರಿತಾಳನ್ನ ಅದೇ ಗ್ರಾಮದ ಸಂತೋಷ್ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.

ತುಮಕೂರು, (ಸೆಪ್ಟೆಂಬರ್ 21): ಮಹಿಳೆ ತನ್ನ ಎರಡು ಮಕ್ಕಳ ಜೊತೆ ಸೇರಿ ತಾನು ಕೂಡ ಜೀವ ಬಿಟ್ಟಿದ್ದಾಳೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಡಪಲಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಪತಿಯ ಅಜ್ಜಿ ಕಿರುಕುಳದಿಂದ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಕಡಪಲಕೆರೆ ಗ್ರಾಮದ ಸರಿತಾಳನ್ನ ಅದೇ ಗ್ರಾಮದ ಸಂತೋಷ್ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಳೆದ 6 ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು. ಆಟೋ ಚಾಲಕನಾಗಿದ್ದ ಸಂತೋಷ್, ಮದುವೆ ಆದಗಿಂದಲೂ ತನ್ನ ತಾಯಿ ಹಾಗೂ ಅಜ್ಜಿ ಜೊತೆ ಸೇರಿ ಕಿರುಕುಳ ಕೊಡುತ್ತಿದ್ದನು. ಹೀಗಾಗಿಯೇ ಮನನೊಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಸರಿತಾ ಜೀವ ಬಿಟ್ಟಿದ್ದಾಳೆ.