ಹುಣಸೂರಲ್ಲಿ ಪ್ರೀತಿಸಿ ಮದುವೆಯಾದವರು ಒಂದೇ ವರ್ಷದಲ್ಲಿ ಬೇರೆಯಾದರು!
ಆದರೆ ಪತಿದೇವರು ಅಭಿಷೇಕ್ ಗೆ ಈಗ ಪತ್ನಿ ಬೇಡವಾಗಿದೆಯಂತೆ. ಅವನು ಮತ್ತು ಇತರ 16 ಜನರ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೈಸೂರು: ಮೂರು ವರ್ಷದ ಹಿಂದೆ ಪ್ರೀತಿ; ನಂತರ ಒಂದು ವರ್ಷ ಕೋರ್ಟ್ ಶಿಪ್ (Courtship) ಬಳಿಕ 2021 ರಲ್ಲಿ ಮದುವೆ, ಲಗ್ನವಾದ ಒಂದು ವರ್ಷದ ನಂತರ ಪ್ರೀತಿಸಿ ಮದುವೆಯಾದ ಪತಿಗೆ ಪತ್ನಿ ಮೇಲೆ ಬೇಸರ-ದಂಪತಿ ಈಗ ದೂರ ದೂರ! ಹುಣಸೂರಿಗೆ ಹತ್ತಿರದ ಮರೂರು ಗ್ರಾಮದ ಯುವತಿಯೊಬ್ಬಳ ಬಾಳಲ್ಲಿ ನಡೆದ ಘಟನಾವಳಿಗಳ ಸರಣಿ ಇದು. ಮದುವೆಯೇನೂ ಸಂಬಂಧಿಕರ ಸಮ್ಮುಖದಲ್ಲೇ ನಡೆಯಿತು. ಆದರೆ ಪತಿದೇವರು ಅಭಿಷೇಕ್ ಗೆ ಈಗ ಪತ್ನಿ ಬೇಡವಾಗಿದೆಯಂತೆ. ಅವನು ಮತ್ತು ಇತರ 16 ಜನರ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.