Karnataka Assembly Polls: ಸಿದ್ದರಾಮಯ್ಯರಂತೆ ಸಾರ್ವಜನಿಕವಾಗಿ ಮುತ್ತಿಡುವ ಮಹಿಳಾ ಅಭಿಮಾನಿಗಳು ಹೆಚ್ ಡಿ ಕುಮಾರಸ್ವಾಮಿಗೂ ಇದ್ದಾರೆ!

|

Updated on: Apr 01, 2023 | 7:00 PM

ಕುಮಾರಸ್ವಾಮಿಯವರು ಕೆಮೆರಾಗೆ ಬೆನ್ನು ಮಾಡಿದ್ದರಿಂದ ಕಾರ್ಯಕರ್ತೆಯ ಮುತ್ತಿನಿಂದ ಮುಜುಗರಕ್ಕೊಳಗಾದರೋ ಅಥವಾ ಪುಳಕಿತರಾದರೋ ಅಂತ ಗೊತ್ತಾಗಲಿಲ್ಲ.

ಬೆಂಗಳೂರು: ಸಿದ್ದರಾಮಯ್ಯನವರೇ, ಸಾರ್ವಜನಿಕ ವೇದಿಕೆಗಳಲ್ಲಿ ಮಹಿಳೆಯರು ನಿಮಗಷ್ಟೇ ಮುತ್ತಿಡುತ್ತಾರೆ ಅಂತ ಬೀಗಬೇಡಿ, ನನಗೂ ಅಂಥ ಮಹಿಳಾ ಅಭಿಮಾನಿಗಳಿದ್ದಾರೆ ಅಂತ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇನ್ನು ನಿರ್ಭಿಡೆಯಿಂದ ಹೇಳಬಹುದು ಮಾರಾಯ್ರೇ! ಪಂಚರತ್ನ ಯಾತ್ರೆ (Pancharatna Yatre) ಕಾರ್ಯಕ್ರಮದ ಭಾಗವಾಗಿ ರಾಜ್ಯದೆಲ್ಲೆಡೆ ಸುತ್ತಿ ಬಳಲುತ್ತಿರುವ ಕುಮಾರಸ್ವಾಮಿಯವರಿಗೆ ಇಂದು ಯಶವಂತಪುರದ (Yeshwanthpur) ವಿಧಾನಸಭಾ ಕ್ಷೇತ್ರದ ಮಾರುತಿ ನಗರದಲ್ಲಿ ಯಾತ್ರೆ ಮುಂದುವರಿಸಿಕೊಂಡು ಹೋಗುತ್ತಿದ್ದಾಗ ಮಹಿಳಾ ಕಾರ್ಯಕರ್ತೆಯೊಬ್ಬರು ಕೆನ್ನೆಗೆ ಮುದ್ದಿಸಿದರು. ಕುಮಾರಸ್ವಾಮಿಯವರು ಕೆಮೆರಾಗೆ ಬೆನ್ನು ಮಾಡಿದ್ದರಿಂದ ಕಾರ್ಯಕರ್ತೆಯ ಮುತ್ತಿನಿಂದ ಮುಜುಗರಕ್ಕೊಳಗಾದರೋ ಅಥವಾ ಪುಳಕಿತರಾದರೋ ಅಂತ ಗೊತ್ತಾಗಲಿಲ್ಲ. ಎನಿವೇಸ್, ಸಿದ್ದರಾಮಯ್ಯನವರ ಜೊತೆ ವಾದ ಮಾಡಲು ಅವರಿಗೊಂದು ಹೊಸ ಆಯಾಮ ಸಿಕ್ಕಿದ್ದು ಮಾತ್ರ ಸುಳ್ಳಲ್ಲ!

ಮತ್ತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ