Mishap in Hassan: ಚಲಿಸುತ್ತಿದ್ದಾಗಲೇ ನಡುರಸ್ತೆಯಲ್ಲಿ ಬೆಂಕಿಹೊತ್ತಿಕೊಂಡು ಉರಿದ ಕಾರು, ಪ್ರಯಾಣಿಸುತ್ತಿದ್ದ ಕುಟುಂಬ ಸುರಕ್ಷಿತ!

Mishap in Hassan: ಚಲಿಸುತ್ತಿದ್ದಾಗಲೇ ನಡುರಸ್ತೆಯಲ್ಲಿ ಬೆಂಕಿಹೊತ್ತಿಕೊಂಡು ಉರಿದ ಕಾರು, ಪ್ರಯಾಣಿಸುತ್ತಿದ್ದ ಕುಟುಂಬ ಸುರಕ್ಷಿತ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 01, 2023 | 5:45 PM

ಕಾರು ನಡುರಸ್ತೆಯಲ್ಲಿ ನಿಂತಿದ್ದರಿಂದ ಕೆಲ ಸಮಯದವರೆಗೆ ಟ್ರಾಫಿಕ್ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.  

ಹಾಸನ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಚಲಿಸುತಿದ್ದ ಕಾರೊಂದು ಇದ್ದಕ್ಕಿದ್ದಂತೆ ಹೊತ್ತಿಯುರಿದ ಘಟನೆ ಶುಕ್ರವಾರದಂದು ನಡೆದಿದೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ರಾಜೀವ್ (Rajiv), ಅವರ ಪತ್ನಿ ಮತ್ತು ಅವರ ಮಗ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಕಾರಲ್ಲಿ ಬೆಂಕಿ ಕಾಣಿಸಿದ ಕೂಡಲೇ ಅವರೆಲ್ಲ ಕಾರನ್ನು ನಡುರಸ್ತೆಯಲ್ಲಿ (middle of the road) ನಿಲ್ಲಿಸಿ ಹೊರಬಂದಿದ್ದಾರೆ. ದಾರಿಹೋಕರೊಬ್ಬರು ಕೂಡಲೇ ಅಗ್ನಿಶಾಮಕ ದಳ (fire brigade) ಕಚೇರಿಗೆ ಫೋನ್ ಮಾಡಿದ್ದರಿಂದ ಫೈರ್ ಎಂಜಿನ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರಾದರೂ ವಾಹನ ಸಂಪೂರ್ಣವಾಗಿ ಹಾಳಾಗಿತ್ತು. ಕಾರು ನಡುರಸ್ತೆಯಲ್ಲಿ ನಿಂತಿದ್ದರಿಂದ ಕೆಲ ಸಮಯದವರೆಗೆ ಟ್ರಾಫಿಕ್ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಮತ್ತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ