ಕಜ್ಜಾಯ ಕೊಡುವ ನೆಪದಲ್ಲಿ ಮನೆಗೆ ಕರೆದು ವೃದ್ಧೆಯ ಹತ್ಯೆ

Updated on: Nov 09, 2025 | 8:13 PM

ಕಜ್ಜಾಯ ಕೊಡುವ ನೆಪದಲ್ಲಿ ಮನೆಗೆ ಕರೆದು ವೃದ್ಧೆಯನ್ನು ಕೊಲೆ ಮಾಡಿ ಮಹಿಳೆಯ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಆನೇಕಲ್‌ನಲ್ಲಿ ನಡೆದಿದೆ. ದೀಪಾವಳಿ ಹಬ್ಬಕ್ಕೆ ಮಾಡಿದ ಕಜ್ಜಾಯ ನೀಡುತ್ತೇನೆ ಬನ್ನಿ ಎಂದು ಅಜ್ಜಿಯೊಬ್ಬರನ್ನು ಕರೆದ ಅದೇ ಊರಿನ ಮಹಿಳೆ, ಅಜ್ಜಿ ಬಳಿ ಇರುವ ಚಿನ್ನಕ್ಕಾಗಿ ಆಕೆಯನ್ನೇ ಕೊಂದು ಕೆರೆಗೆ ಎಸೆದಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗೂರು ಬಳಿ ನಡೆದಿದೆ. 68 ವರ್ಷದ ಭದ್ರಮ್ಮ ಮೃತ ದುರ್ದೈವಿ. ಕೊಲೆ ಮಾಡಿದ ಬಳಿಕ ಮೃತದೇಹವನ್ನು ಕೆರೆಗೆ ಎಸೆದಿದ್ದಾರೆ. ದೀಪ ಕೊಲೆ ಮಾಡಿರುವ ಚಾಲಾಕಿ ಕಿಲ್ಲರ್ ಲೇಡಿ ಆಗಿದ್ದಾಳೆ.

ಅನೇಕಲ್, (ನವೆಂಬರ್ 09): ಕಜ್ಜಾಯ ಕೊಡುವ ನೆಪದಲ್ಲಿ ಮನೆಗೆ ಕರೆದು ವೃದ್ಧೆಯನ್ನು ಕೊಲೆ ಮಾಡಿ ಮಹಿಳೆಯ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಆನೇಕಲ್‌ನಲ್ಲಿ ನಡೆದಿದೆ. ದೀಪಾವಳಿ ಹಬ್ಬಕ್ಕೆ ಮಾಡಿದ ಕಜ್ಜಾಯ ನೀಡುತ್ತೇನೆ ಬನ್ನಿ ಎಂದು ಅಜ್ಜಿಯೊಬ್ಬರನ್ನು ಕರೆದ ಅದೇ ಊರಿನ ಮಹಿಳೆ, ಅಜ್ಜಿ ಬಳಿ ಇರುವ ಚಿನ್ನಕ್ಕಾಗಿ ಆಕೆಯನ್ನೇ ಕೊಂದು ಕೆರೆಗೆ ಎಸೆದಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗೂರು ಬಳಿ ನಡೆದಿದೆ. 68 ವರ್ಷದ ಭದ್ರಮ್ಮ ಮೃತ ದುರ್ದೈವಿ. ಕೊಲೆ ಮಾಡಿದ ಬಳಿಕ ಮೃತದೇಹವನ್ನು ಕೆರೆಗೆ ಎಸೆದಿದ್ದಾರೆ. ಕೊಲೆ ಮಾಡಿರುವ ಚಾಲಾಕಿ ಕಿಲ್ಲರ್ ದೀಪ ಸಿಕ್ಕಿಬಿದ್ದಿದ್ದಾಳೆ.

Published on: Nov 09, 2025 08:09 PM