‘ಡಿಕೆಡಿ’ಯ ಕಲರ್ಫುಲ್ ಜಡ್ಜ್ಗಳನ್ನು ಪರಿಚಯಿಸಿದ ಅನುಶ್ರೀ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ದಿನಗಣನೆ ಶುರುವಾಗಿದೆ. ಈ ಶೋಗೆ ಇದು ಐದನೇ ಸೀಸನ್ ಇದಾಗಿದೆ. ಈ ಶೋಗೆ ಯಾರೆಲ್ಲ ಜಡ್ಜ್ ಸ್ಥಾನದಲ್ಲಿ ಇದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರವೂ ಸಿಕ್ಕಿದೆ. ಹಾಗಾದರೆ ಯಾರು ಇಲ್ಲಿದ್ದಾರೆ? ಆ ಕುರಿತು ಇಲ್ಲಿದೆ ವಿವರ.
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5’ರ ಆರಂಭಕ್ಕೆ ದಿನ ಗಣನೆ ಶುರುವಾಗಿದೆ. ಹೊಸ ಸೀಸನ್ ನವೆಂಬರ್ 15ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಕಾಣಲಿದೆ. ಈ ಶೋನಲ್ಲಿ ಜಡ್ಜ್ ಆಗಿ ವಿಜಯ್ ರಾಘವೇಂದ್ರ, ರಚಿತಾ ರಾಮ್, ಶಿವಣ್ಣ, ಅರ್ಜುನ್ ಜನ್ಯ ಇದ್ದಾರೆ. ‘ಕರುನಾಡನ್ನು ಕುಣಿಸೋಕೆ ಬಂದ ಪ್ರತಿಭೆಗಳ ಡ್ಯಾನ್ಸ್ ಪಯಣಕ್ಕೆ ಹೆಜ್ಜೆ ಹಾಕಿ ಜೊತೆಯಾದ್ರು ಡ್ಯಾನ್ಸ್ ಸೆಲೆಬ್ರಿಟಿಗಳು’ ಎಂದು ಜೀ ಕನ್ನಡ ವಾಹಿನಿ ಬರೆದುಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
