ಹಾಸನದ ಯೋಧನೊಬ್ಬನ ಮದುವೆಯಲ್ಲಿ ಧುತ್ತನೆ ಪ್ರತ್ಯಕ್ಷಳಾದ ಮಹಿಳೆ ತಾನು ಅವನ ಮೊದಲ ಹೆಂಡತಿ ಎಂದಳು!

ಹಾಸನದ ಯೋಧನೊಬ್ಬನ ಮದುವೆಯಲ್ಲಿ ಧುತ್ತನೆ ಪ್ರತ್ಯಕ್ಷಳಾದ ಮಹಿಳೆ ತಾನು ಅವನ ಮೊದಲ ಹೆಂಡತಿ ಎಂದಳು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 11, 2022 | 4:05 PM

ತಾನು ಅವನ ಹೆಂಡತಿ ಎಂದು ವಾದಿಸುತ್ತಿರುವ ಈಕೆ ಹಾಸನ ನಗರದ ಹೊರವಲಯದಲ್ಲಿರುವ ಬೂವನಹಳ್ಳಿಯಲ್ಲಿ ಶುಕ್ರವಾರ ನಡೆದ ಯೋಧನ ಮದುವೆ ನಿಲ್ಲಿಸಲು ಬಂದಳಾದರೂ ಅಷ್ಟರಲ್ಲಾಗಲೇ ಮದುವೆ ಮುಗಿದುಹೋಗಿತ್ತು.

ಹಾಸನ: ಇದೊಂದು ವಿಚಿತ್ರ ಘಟನೆ ಮಾರಾಯ್ರೇ. ಯೋಧನೊಬ್ಬನ (soldier) ಮದುವೆಯನ್ನು ಒಬ್ಬ ಮಹಿಳೆ ನಿಲ್ಲಿಸಲು ಪ್ರಯತ್ನಿಸಿದ ಪ್ರಸಂಗವಿದು. ಮಹಿಳೆ ಹೇಳೋದೇನೆಂದರೆ ಅಕೆ ವಿಧವೆ ಮತ್ತು ಎರಡು ಮಕ್ಕಳ ತಾಯಿ. ಮಗಳು ಗಗನಸಖಿಯಾಗಿ (air hostess) ಕೆಲಸ ಮಾಡುತ್ತಾಳೆ ಮತ್ತು ಮಗು 7ನೇ ತರಗತಿಯಲ್ಲಿ ಓದುತ್ತಿದ್ದಾನೆ, ಸುಮಾರು 6 ತಿಂಗಳು ಹಿಂದೆ ಯೋಧ ಹೊಸ ಬಾಳು ನೀಡುತ್ತೇನೆ ಅಂತ ಆಶ್ವಾಸನೆ ನೀಡಿ ಮನೆಯಲ್ಲೇ ತಾಳಿ ಕಟ್ಟಿದನಂತೆ. ಹಾಗಾಗಿ ತಾನು ಅವನ ಹೆಂಡತಿ ಎಂದು ವಾದಿಸುತ್ತಿರುವ ಈಕೆ ಹಾಸನ (Hassan) ನಗರದ ಹೊರವಲಯದಲ್ಲಿರುವ ಬೂವನಹಳ್ಳಿಯಲ್ಲಿ ಇಂದು ನಡೆದ ಯೋಧನ ಮದುವೆ ನಿಲ್ಲಿಸಲು ಬಂದಳಾದರೂ ಅಷ್ಟರಲ್ಲಾಗಲೇ ಮದುವೆ ಮುಗಿದುಹೋಗಿತ್ತು. ವಿಚಾರಣೆ ನಡೆಸಲು ಮಹಿಳೆ ಮತ್ತು ಯೋಧನನ್ನು ಪೊಲೀಸರು ಠಾಣೆಗೆ ಕರೆದೊಯ್ದುರು.