Free Bus Effect: ಉಚಿತ ಬಸ್​​ನಲ್ಲಿ ಬಂದು ಮಾದಪ್ಪನ ಹುಂಡಿಗೆ ಕೋಟ್ಯಂತರ ರೂಪಾಯಿ ಸುರಿಯುತ್ತಿರುವ ಮಹಿಳೆಯರು!

| Updated By: ಸಾಧು ಶ್ರೀನಾಥ್​

Updated on: Jul 28, 2023 | 4:40 PM

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮೇಲೆ ಮಹಿಳಾ ಭಕ್ತರು ತುಂಬಿತುಳುಕುತ್ತಿದ್ದಾರೆ. ಹೀಗೆ ಬಂದವರು ಮಲೆ ಮಾದಪ್ಪನ ಹುಂಡಿಗೆ ಭಾರೀ ಪ್ರಮಾಣದಲ್ಲಿ ಕಾಣೆಕೆ ಸಲ್ಲಿಸುತ್ತಿದ್ದಾರೆ.

ಚಾಮರಾಜನಗರ, ಜುಲೈ 28: ಎಲ್ಲ ಮಹಿಳೆಯರಿಗೂ ರಾಜ್ಯ ಸರ್ಕಾರಿ ಬಸ್​​​ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಎಫೆಕ್ಟ್ ರಾಜ್ಯ ದೇಗುಲಗಳ ಮೇಲೆ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಯೋಜನೆ ಜಾರಿಗೆ ಬಂದಾಗಿನಿಂದ ರಾಜ್ಯದಲ್ಲಿ ಮಹಿಳೆಯರು ಭಕ್ತಿಪರವಶರಾಗಿದ್ದಾರೆ. ಅದರಲ್ಲೂ ಚಾಮರಾಜನಗರ (Chamarajanagar) ಜಿಲ್ಲೆಯಲ್ಲಿ ಬೆಟ್ಟದ ಮೇಲಿರುವ ಮಾದೇಶ್ವರನ ದರ್ಶನಕ್ಕೆ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು (Hanur) ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ (Male Mahadeshwar Hill) ಮೇಲೆ ಮಹಿಳಾ ಭಕ್ತರು ತುಂಬಿತುಳುಕುತ್ತಿದ್ದಾರೆ.

ಹೀಗೆ ಬಂದವರು ಮಲೆ ಮಾದಪ್ಪನ ಹುಂಡಿಗೆ ಭಾರೀ ಪ್ರಮಾಣದಲ್ಲಿ ಕಾಣೆಕೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಮಾದಪ್ಪನ ಹುಂಡಿಯಲ್ಲಿ (Madappa Hundi) ಕೋಟಿ ಕೋಟಿ ಹಣ ಜಮೆ ಆಗ್ತಿದೆ. ಇದರಿಂದ 21 ದಿನಗಳಲ್ಲಿ ಮತ್ತೆ ಮಾದಪ್ಪ ಕೋಟ್ಯಾಧೀಶನಾಗಿದ್ದಾನೆ. ಕಾಣಿಕೆ ರೂಪದಲ್ಲಿ ಹುಂಡಿಯಲ್ಲಿ 1,56,38,122 ರೂ ಹಣ ಸಂಗ್ರಹವಾಗಿದೆ. ಭಕ್ತರು ತಮ್ಮ ಆರಾದ್ಯ ದೈವ ಮಾದಪ್ಪನಿಗೆ 6 ಲಕ್ಷಕ್ಕೂ ಹೆಚ್ಚು ಹಣವನ್ನು ನಾಣ್ಯ ರೂಪದಲ್ಲಿ ಸಮರ್ಪಣೆ ಮಾಡಿದ್ದಾರೆ. ಜೊತೆಗೆ 30 ಗ್ರಾಂ ಚಿನ್ನ,1ಕೆಜಿ 26 ಗ್ರಾಂ ಬೆಳ್ಳಿಯನ್ನೂ ಅರ್ಪಿಸಿದ್ದಾರೆ ಭಕ್ತರು.