Siddaramaiah; ಜೂನ್ 11ರಿಂದ ಕರ್ನಾಟಕದ ಮಹಿಳೆಯರು ರಾಜ್ಯದ ಯಾವುದೇ ಮೂಲೆಗೆ ಉಚಿತವಾಗಿ ಪ್ರಯಾಣಿಸಬಹುದು: ಸಿದ್ದರಾಮಯ್ಯ
ಈ ಗ್ಯಾರಂಟಿ ವಾತಾನುಕೂಲಿತ ಬಸ್ ಮತ್ತು ಪರರಾಜ್ಯದ ಮಹಿಳೆಯರಿಗೆ ಅನ್ವಯಿಸುವುದಿಲ್ಲ.
ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆ ಸಮಯದಲ್ಲಿ ನೀಡಿದ ಎಲ್ಲ 5 ಗ್ಯಾರಂಟಿಗಳ (5 guarantees) ಅನುಷ್ಠಾನದ ವಿವರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ಘೋಷಿಸಿದರು. ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತಾಡಿದ ಮುಖ್ಯಮಂತ್ರಿ, ಮಹಿಳೆಯರಿಗೆ ಉಚಿತ ಬಸ್ ಗ್ಯಾರಂಟಿ ಇದೇ ತಿಂಗಳು 11 ರಿಂದ ಜಾರಿಯಾಗಲಿದೆ ಎಂದು ಹೇಳಿದರು. ಈ ಗ್ಯಾರಂಟಿ ಯೋಜನೆಯಡಿ ವಿದ್ಯಾರ್ಥಿನಿಯರೂ ಬರುತ್ತಾರೆ. ಮಹಿಳೆಯರು ಬಿಎಮ್ ಟಿಸಿ (BMTC) ಮತ್ತು ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ (KSTRC) ಜೂನ್ 11 ರಿಂದ ಹಣ ಟಿಕೆಟ್ ಗೆ ಹಣ ತೆರದೆ ಪ್ರಯಾಣಿಸಬಹುದು. ಆದರೆ, ಕೇವಲ ಕರ್ನಾಟಕದೊಳಗೆ ಮಾತ್ರ ಅವರು ಪ್ರಯಾಣಿಸಬಹುದು. ಬೆಂಗಳೂರಿಂದ ಬೀದರ್ ಗೆ ಹೋಗಬಹುದು ಆದರೆ ಬೆಂಗಳೂರಿಂದ ತಿರುಪತಿ, ಚೆನೈ, ಹೊಸೂರು ಮೊದಲಾದ ಊರುಗಳಿಗೆ ಪ್ರಯಾಣಿಸಲಾಗದು. ಹಾಗೆಯೇ, ಈ ಗ್ಯಾರಂಟಿ ವಾತಾನುಕೂಲಿತ ಬಸ್ ಮತ್ತು ಪರರಾಜ್ಯದ ಮಹಿಳೆಯರಿಗೆ ಅನ್ವಯಿಸುವುದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

