ಕೆಂಪು ಸುಂದರಿ ಟೊಮ್ಯಾಟೋ ಖರೀದಿಗಾಗಿ ಉದ್ದುದ್ದ ಕ್ಯೂ ನಿಂತ ಮಹಿಳೆಯರು! ಎಲ್ಲಿ?

|

Updated on: Aug 05, 2023 | 1:25 PM

Ghaziabad: ಲಾಲ್ ಟಮಾಟರ್ ಅಂದರೆ ನಾವೂ ನೀವೆಲ್ಲ ಆಪ್ಯಾಯತೆಯಿಂದ ಕರೆಯುವ ಕೆಂಪು ಸುಂದರಿ ಟೊಮ್ಯಾಟೋ ಖರೀದಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ.

ಲಾಲ್ ಟಮಾಟರ್ ಅಂದರೆ ನಾವೂ ನೀವೆಲ್ಲ ಆಪ್ಯಾಯತೆಯಿಂದ ಕರೆಯುವ ಕೆಂಪು ಸುಂದರಿ ಟೊಮ್ಯಾಟೋ ಖರೀದಿಗೆ ಮಹಿಳೆಯರು (Women) ಮುಗಿಬಿದ್ದಿದ್ದಾರೆ. ಘಾಜಿಯಾಬಾದ್​ನಲ್ಲಿ ಟೊಮ್ಯಾಟೋಗಾಗಿ ಕ್ಯೂ (Queue) ನಿಂತಿದ್ದಾರೆ ಜನ! ಯಾಕೆ ಗೊತ್ತಾ? ವ್ಯಾಪಾರಿಯೊಬ್ಬ ಬಂದು ಕಡಿಮೆ ದರದಲ್ಲಿ ಟೊಮ್ಯಾಟೋ ಮಾರಾಟ ಮಾಡುತ್ತಿದ್ದ!

ದೆಹಲಿ-NCR ಭಾಗದಲ್ಲಿರುವ ಘಾಜಿಯಾಬಾದ್ ನಗರದ (Ghaziabad) ಮಹಾಗುಣಪುರಮ್​​ ಸೊಸೈಟಿಯಲ್ಲಿ ಟೊಮ್ಯಾಟೋ ವ್ಯಾಪಾರ ಹೀಗೆ ಜೋರಾಗಿ ನಡೆದಿದೆ. ಕಡಿಮೆ ಬೆಲೆಯಲ್ಲಿ ಟೊಮ್ಯಾಟೋ ಸಿಗ್ತಿದೆ ಎಂದು ಜನರ ಖುಷಿಗೆ ಪಾರವೇ ಇಲ್ಲವಾಗಿದೆ ಅಷ್ಟು ಹೈರಾಣಗೊಂಡಿದ್ದಾರೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿರುವ ಟೊಮ್ಯಾಟೋ ದರ (Tomato Price).

ಕೋಲಾರದ ಕೆಂಪು ಸುಂದರಿ  ಬದುಕು ಈಗ ಹೇಗಿದೆ?

ಮೂರು ತಿಂಗಳಿಂದ ಟೊಮ್ಯಾಟೋ ಮುಟ್ಟಿದವರ ಬದುಕು ಚಿನ್ನ ಎನ್ನುವಂತಾಗಿದೆ. ಟೊಮ್ಯಾಟೋ ಬೆಳೆದವರು ಕೋಟ್ಯಾಧೀಶ್ವರರಾಗಿದ್ದಾರೆ. ಹಾಗೇ ಕೋಲಾರದಲ್ಲಿ ಮಾರಾಟ ಮಾಡಿದ APMC ಮಾರುಕಟ್ಟೆಗೂ ಕೋಟಿ ಕೋಟಿ ತೆರಿಗೆ ಸಂಗ್ರಹವಾಗಿದೆ. ವ್ಯಾಪಾರಿಗಳು, ಏಜೆಂಟರು ಕೂಡಾ ಭರ್ಜರಿ ಲಾಭ ಮಾಡಿದ್ದಾರೆ. ಟೊಮ್ಯಾಟೋ ಔಷಧಿ, ಸಸಿ ಮಾರಾಟಗಾರರು ಹಣ ಸಂಪಾದಿಸಿದ್ದಾರೆ.. ಹೀಗೆ ಟೊಮ್ಯಾಟೋ ಮುಟ್ಟಿದ ಪ್ರತಿಯೊಬ್ಬರೂ ಲಾಭ ಗಳಿಸಿದ್ದಾರೆ. ಇಷ್ಟೆಲ್ಲಾ ವ್ಯಾಪಾರಕ್ಕೆ ಮೂಲನೆಲೆಯಾದ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮ್ಯಾಟೋ ಮಾರುಕಟ್ಟೆ ಕೋಲಾರದ ಎಪಿಎಂಸಿ ಮಾರುಕಟ್ಟೆಗೂ ಕೂಡಾ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಬಳೆಕೆದಾರರ ಶುಲ್ಕ ಅಂದರೆ ಸೆಸ್​ ಸಂಗ್ರಹವಾಗಿದೆ. ಜುಲೈ ತಿಂಗಳಲ್ಲೇ 1.24 ಕೋಟಿ ರೂಪಾಯಿ ಸೆಸ್​ ಸಂಗ್ರಹವಾಗಿದೆ. ಸದ್ಯ ಕೋಲಾರ APMC ಮಾರುಕಟ್ಟೆಯಲ್ಲಿ 100 ರೂ.ಗೆ 60 ಪೈಸೆ ಸೆಸ್​ ವಿಧಿಸಲಾಗುತ್ತದೆ. ಕೋಲಾರ APMC ಮಾರುಕಟ್ಟೆಗೆ ಜುಲೈನಲ್ಲೇ 3.12 ಲಕ್ಷ ಕ್ವಿಂಟಾಲ್​ ಟೊಮ್ಯಾಟೋ ಪೂರೈಕೆಯಾಗಿದೆ. 15 ಕೆಜಿಯ 20.83 ಲಕ್ಷ ಬಾಕ್ಸ್​ ಟೊಮ್ಯಾಟೋ ಮಾರಾಟವಾಗಿದ್ದು, ಒಂದು ಬಾಕ್ಸ್​​ ಟೊಮ್ಯಾಟೋಗೆ ಕನಿಷ್ಠ 930 ರಿಂದ ಗರಿಷ್ಠ 2,700 ರೂ.ವರೆಗೆ ಮಾರಾಟವಾಗಿದೆ. ಇದ್ರಿಂದ APMC ಮಾರುಕಟ್ಟೆಗೂ ದುಪ್ಪಟ್ಟು ಸೆಸ್​ ಸಂಗ್ರಹವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ