4 ತಿಂಗಳಿಂದ ರಜೆ ಇಲ್ಲದ ದುಡಿತ, ವಿಶ್ರಾಂತಿಗಾಗಿ ವಿಕ್ಟೋರಿಯಾ ಸಿಬ್ಬಂದಿ ಮೊರೆತ

| Updated By: ಸಾಧು ಶ್ರೀನಾಥ್​

Updated on: Jul 09, 2020 | 5:26 PM

[lazy-load-videos-and-sticky-control id=”yM_bQmejWRc”]ಬೆಂಗಳೂರು: ಕೊರೊನಾ ವೈರಸ್‌ ಹೆಮ್ಮಾರಿ ಬಂದು ಅಪ್ಪಳಿಸಿದ ಮೇಲೆ ಬೆಂಗಳೂರಿನ ಕೆಲ ಸರ್ಕಾರಿ ಆಸ್ಪತ್ರೆಗಳು ಜನರ ಪಾಲಿಗೆ ದೇವದೂತ ಆಗಿವೆ. ಇದರಲ್ಲಿ ವಿಕ್ಟೋರಿಯಾ ಆಸ್ಪತ್ರೆ ಕೂಡಾ ಒಂದು. ಆದ್ರೆ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿನಿಂದ ರೆಸ್ಟೇ ಇಲ್ಲ. ಹೀಗಾಗಿ ಈ ಸಿಬ್ಬಂದಿ ಈಗ ಒಂದು ವಾರವಾದ್ರೂ ರಜೆ ಕೊಡಿ ಅಂತಾ ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ವೈದ್ಯರು, ಸೆಕ್ಯುರಿಟಿ, ಡ್ರೈವರ್ಸ್, […]

4 ತಿಂಗಳಿಂದ ರಜೆ ಇಲ್ಲದ ದುಡಿತ, ವಿಶ್ರಾಂತಿಗಾಗಿ ವಿಕ್ಟೋರಿಯಾ ಸಿಬ್ಬಂದಿ ಮೊರೆತ
Follow us on

[lazy-load-videos-and-sticky-control id=”yM_bQmejWRc”]ಬೆಂಗಳೂರು: ಕೊರೊನಾ ವೈರಸ್‌ ಹೆಮ್ಮಾರಿ ಬಂದು ಅಪ್ಪಳಿಸಿದ ಮೇಲೆ ಬೆಂಗಳೂರಿನ ಕೆಲ ಸರ್ಕಾರಿ ಆಸ್ಪತ್ರೆಗಳು ಜನರ ಪಾಲಿಗೆ ದೇವದೂತ ಆಗಿವೆ. ಇದರಲ್ಲಿ ವಿಕ್ಟೋರಿಯಾ ಆಸ್ಪತ್ರೆ ಕೂಡಾ ಒಂದು. ಆದ್ರೆ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿನಿಂದ ರೆಸ್ಟೇ ಇಲ್ಲ. ಹೀಗಾಗಿ ಈ ಸಿಬ್ಬಂದಿ ಈಗ ಒಂದು ವಾರವಾದ್ರೂ ರಜೆ ಕೊಡಿ ಅಂತಾ ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ವೈದ್ಯರು, ಸೆಕ್ಯುರಿಟಿ, ಡ್ರೈವರ್ಸ್, ಹೌಸ್ ಕಿಪಿಂಗ್ ಮತ್ತು ಪುಡ್ ಸಪ್ಲೇ ಮಾಡುವ ಕೆಲಸಗಾರರು ಸೇರಿದಂತೆ ನಿರಂತರವಾಗಿ ಕೋವಿಡ್‌ ವಾರಿಯರ್ಸ್‌ ಆಗಿ ಜನಸೇವೆಯಲ್ಲಿ ತೊಡಗಿದ್ದಾರೆ. ಇದುವರೆಗೆ ಒಂದೇ ಒಂದು ರಜೆ ಪಡೆದಿಲ್ಲ. ನಮಗೂ ಒಂದು ವಾರ ರಜೆ ಕೊಡಿ, ರೆಸ್ಟ್‌ ತಗೋತಿವಿ ಅಂತಾ ಸಿಬ್ಬಂದಿ ಸರ್ಕಾರಕ್ಕೆ ಮನವಿ ನಾಡಿದ್ದಾರೆ.

ಈ ನಡುವೆ ಸಿಬ್ಬಂದಿಗೆ ನಡೆಸಿದ ಕೊರೊನಾ ಟೆಸ್ಟ್‌ನಲ್ಲಿ ಒಬ್ಬ ಡ್ರೈವರ್‌ಗೆ ಪಾಸಿಟಿವ್‌ ಬಂದಿದೆ. ಹೀಗಾಗಿ ಗಾಬರಿ ಬಿದ್ದಿರುವ ಕೆಳ ವರ್ಗದ ಸಿಬ್ಬಂದಿ, ನಮಗೂ ಸ್ವಾಬ್ ಟೆಸ್ಟ್ ಮಾಡಲಾಗಿದ್ದು ಸದ್ಯದಲ್ಲೇ ರಿಸಲ್ಟ್ ಬರಲಿದೆ. ಡ್ರೈವರ್‌ನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದರೂ ನಮಗೆ ಕ್ವಾರಂಟೀನ್ ಮಾಡಿಲ್ಲ. ಈ ವೇಳೆ ನಮ್ಮಿಂದ ಕುಟುಂಬಕ್ಕೆ ಪಾಸಿಟಿವ್ ಆದ್ರೆ ಹೇಗೆ ಅಂತಾ ಆತಂಕಪಡುತ್ತಿದ್ದಾರೆ.

Published On - 1:14 pm, Thu, 9 July 20