Budget 2023 | ಬೇರೆ ರಾಷ್ಟ್ರಗಳ ನಾಯಕರು ಬೆರಗಾಗುವಂಥ ಕೇಂದ್ರ ಆಯವ್ಯಯ ಪಟ್ಟಿ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ: ಬಿಎಸ್ ಯಡಿಯೂರಪ್ಪ

|

Updated on: Feb 01, 2023 | 5:32 PM

ನಿರ್ಮಲಾ ಸೀತಾರಾಮನ್ ಮಂಡಿಸುವ ಬಜೆಟ್ ಮೇಲೆ ಎಲ್ಲ ರಾಷ್ಟ್ರಗಳ ಕಣ್ಣಿತ್ತು, ಎಲ್ಲರೂ ನಿಬ್ಬೆರಗಾಗುವಂಥ ಕೇಂದ್ರ ಆಯವ್ಯಯ ಪಟ್ಟಿಯನ್ನುಅವರು ಮಂಡಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ನವದೆಹಲಿ: ಇಂದು ಮಧ್ಯಾಹ್ನ ದೆಹಲಿ ತಲುಪಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು (BS Yediyurappa) ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡಿಸಿದ ಬಜೆಟ್ 2023 (Budget 2023) ಅನ್ನು ಮುಕ್ತಕಂಠದಿಂದ ಕೊಂಡಾಡಿ ಇದೊಂದು ಅದ್ಭುತವಾದ ಬಜೆಟ್ ಎಂದರು. ಕೋವಿಡ್ ಪಿಡುಗಿನಿಂದಾಗಿ ವಿಶ್ವದ ಎಲ್ಲ ರಾಷ್ಟ್ರಗಳ ಆರ್ಥಿಕ ಸ್ಥಿತಿ ಕಳವಳಕಾರಿಯಾಗಿದೆ, ಈ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸುವ ಬಜೆಟ್ ಮೇಲೆ ಎಲ್ಲ ರಾಷ್ಟ್ರಗಳ ಕಣ್ಣಿತ್ತು. ನಿರ್ಮಲಾ ಅವರು ಎಲ್ಲರೂ ನಿಬ್ಬೆರಗಾಗುವಂಥ ಕೇಂದ್ರ ಆಯವ್ಯಯ ಪಟ್ಟಿಯನ್ನು ಮಂಡಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ