ನಮ್ಮ ದೇಹದಲ್ಲಿ ರಕ್ತದ ಕೊನೇ ಹನಿ ಇರೋವರೆಗೆ ಬಿಜೆಪಿಯ ಧರ್ಮ-ತಾರತಮ್ಯ ಧೋರಣೆ ನಡೆಯಲು ಬಿಡುವುದಿಲ್ಲ: ರಮೇಶ ಕುಮಾರ್
ಗೌನಪಲ್ಲಿಯಲ್ಲಿ ಸಂತೆ ನಡೆಯುವಾಗ ಮುಸಲ್ಮಾನ ವ್ಯಕ್ತಿ ಅಂಗಡಿ ಹಾಕಬಾರದಂತೆ, ಮತ್ತೆಲ್ಲೋ ಜಾತ್ರೆ ನಡೆದರೆ, ಮುಸಲ್ಮಾನ ವ್ಯಾಪಾರಿಗಳಿಗೆ ಪ್ರವೇಶವಿಲ್ಲವಂತೆ. ಈ ದೇಶವೇನು ಅವರಪ್ಪಂದಾ? ಎಂದು ರಮೇಶ್ ಕುಮಾರ್ ಆಕ್ರೋಶದಿಂದ ಹೇಳಿದರು
ಕೋಲಾರ: ಮಾಜಿ ಸ್ಪೀಕರ್ ಮತ್ತು ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ (Ramesh Kumar) ಅವರು ಕೋಲಾರದ (Kolar) ಶ್ರೀನಿವಾಸಪುರ ತಾಲ್ಲೂಕಿನ ಗೌನಪಲ್ಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡುವಾಗ ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಗ್ರಾಮದಲ್ಲಿ ಹೆಚ್ಚಿನವರು ತೆಲುಗು ಭಾಷಿಕರಾದ ಕಾರಣ ಅದೇ ಭಾಷೆಯಲ್ಲಿ ಮಾತಾಡಿದ ರಮೇಶ್ ಕುಮಾರ್ ಅವರು, ಗೌನಪಲ್ಲಿಯಲ್ಲಿ ಸಂತೆ ನಡೆಯುವಾಗ ಮುಸಲ್ಮಾನ ವ್ಯಕ್ತಿ ಅಂಗಡಿ ಹಾಕಬಾರದಂತೆ, ಮತ್ತೆಲ್ಲೋ ಜಾತ್ರೆ ನಡೆದರೆ, ಮುಸಲ್ಮಾನ (Muslim) ವ್ಯಾಪಾರಿಗಳಿಗೆ ಅಲ್ಲಿ ಪ್ರವೇಶವಿಲ್ಲವಂತೆ. ಯಾವನಯ್ಯ ಅವನು ಇದನ್ನೆಲ್ಲ ಹೇಳಲು? ಈ ದೇಶವೇನು ಅವರಪ್ಪಂದಾ? ನಮ್ಮ ದೇಹದಲ್ಲಿ ರಕ್ತದ ಕೊನೆ ಹನಿ ಇರೋವರೆಗೆ ನಾವು ಹಾಗಾಗಲು ಬಿಡುವುದಿಲ್ಲ ಎಂದು ರಮೇಶ್ ಕುಮಾರ್ ಆವೇಶದಿಂದ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ