WPL 2024: ಪಂದ್ಯ ಮುಗಿದ ಬಳಿಕ ಆರ್ಸಿಬಿ ಅಭಿಮಾನಿಗಳಿಗೆ ಸ್ಮೃತಿ ಪಡೆ ಏನು ಹೇಳಿದರು ನೋಡಿ
Royal Challengers Bangalore Women: ಸೋಮವಾರ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಆರ್ಸಿಬಿ 23 ರನ್ಗಳ ಜಯ ಸಾಧಿಸಿತು. ಈ ಬಾರಿಯ ಡಬ್ಲ್ಯೂಪಿಎಲ್ನಲ್ಲಿ ಆರ್ಸಿಬಿ ಬೆಂಗಳೂರಿನಲ್ಲಿ ಆಡಿದ ಕೊನೆಯ ಪಂದ್ಯ ಇದಾಗಿತ್ತು. ಪಂದ್ಯ ಮುಗಿದ ಬಳಿಕ ಅಭಿಮಾನಿಗಳ ಬೆಂಬಲಕ್ಕೆ ಮನಸೋತ ಆರ್ಸಿಬಿ ಆಟಗಾರ್ತಿಯರು ಎಲ್ಲರಿಗೂ ಧನ್ಯವಾದ ಹೇಳಿದರು.
ಮಹಿಳಾ ಪ್ರೀಮಿಯರ್ ಲೀಗ್ 2024 ರ 11 ನೇ ಪಂದ್ಯದಲ್ಲಿ ಸೋಮವಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಯುಪಿ ವಾರಿಯರ್ಸ್ (RCB vs UPW) ತಂಡಗಳು ಸೆಣೆಸಾಟ ನಡೆಸಿದವು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಟೀಮ್ ಯುಪಿ ವಾರಿಯರ್ಸ್ ತಂಡವನ್ನು 23 ರನ್ ಗಳಿಂದ ಮಣಿಸಿತು. ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬೆಂಗಳೂರು ಸ್ಮೃತಿ ಮಂಧಾನ (80) ಮತ್ತು ಎಲ್ಲೀ ಪೆರ್ರಿ (58) ಅರ್ಧಶತಕಗಳ ನೆರವಿನಿಂದ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಬಳಿಕ ಬ್ಯಾಟಿಂಗ್‌ಗೆ ಇಳಿದ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಂಡಿತು. ಈ ಬಾರಿಯ ಡಬ್ಲ್ಯೂಪಿಎಲ್ನಲ್ಲಿ ಆರ್ಸಿಬಿ ಬೆಂಗಳೂರಿನಲ್ಲಿ ಆಡಿದ ಕೊನೆಯ ಪಂದ್ಯ ಇದಾಗಿತ್ತು. ಹೀಗಾಗಿ ಸ್ಟೇಡಿಯಂ ಹೌಸ್ಫುಲ್ ಆಗಿತ್ತು. ಪಂದ್ಯ ಮುಗಿದ ಬಳಿಕ ಅಭಿಮಾನಿಗಳು ನೀಡಿದ ಬೆಂಬಲಕ್ಕೆ ಮನಸೋತ ಆರ್ಸಿಬಿ ಆಟಗಾರ್ತಿಯರು ಮೈದಾನಕ್ಕೆ ಸುತ್ತು ಬಂದು ಎಲ್ಲರಿಗೂ ಧನ್ಯವಾದ ಹೇಳಿದರು. ಅದರಲ್ಲೂ ಕೇಟ್ ಕ್ರಾಸ್ ಆರ್ಸಿಬಿ ಧ್ವಜ ಹಿಡಿದು ಎಲ್ಲ ಫ್ಯಾನ್ಸ್ಗೆ ಥ್ಯಾಂಕ್ಸ್ ಎಂದರು. ಇದರ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ