AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಪರ ಘೋಷಣೆ: ಅರಮನೆಯಂಥ ಮನೆಯಲ್ಲಿದ್ದ ಮೊಹಮ್ಮದ್ ಶಫಿಗೆ ಇನ್ನು ಜೈಲಿನ ಕತ್ತಲು ಕೋಣೆಯೇ ಮನೆ?

ಪಾಕ್ ಪರ ಘೋಷಣೆ: ಅರಮನೆಯಂಥ ಮನೆಯಲ್ಲಿದ್ದ ಮೊಹಮ್ಮದ್ ಶಫಿಗೆ ಇನ್ನು ಜೈಲಿನ ಕತ್ತಲು ಕೋಣೆಯೇ ಮನೆ?

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 05, 2024 | 11:06 AM

Share

ದಶಕಗಳಿಂದ ಇವನ ಕುಟುಂಬ ಮೆಣಸಿನಕಾಯಿ ವ್ಯಾಪಾರದಲ್ಲಿ ತೊಡಗಿದೆ. ಕಷ್ಟಪಟ್ಟು ದುಡಿದು ಹಣ ಸಂಪಾದಿಸಿದ್ದಾರೆ ಅಂತ ವರದಿಗಾರ ಹೇಳುತ್ತಾರಾದರೂ ಬ್ಯಾಡಗಿ ವರ್ತಕರ ಸಂಘ ಮತ್ತು ದಲ್ಲಾಳಿಗಳಿಗೆ ಸಾಕಷ್ಟು ಹಣ ಬಾಕಿಯುಳಿಸಿಕೊಂಡಿದ್ದು ಸಂಘದವರು ಶಫಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಹಾವೇರಿ: ರಾಜ್ಯಸಭೆಗೆ ಆಯ್ಕೆಯಾಗಿರುವ ಡಾ ಸಯ್ಯದ್ ನಾಸೀರ್ ಹುಸ್ಸೇನ್ (Dr Syed Naseer Hussain) ಬೆಂಬಲಿಗರ ಪೈಕಿ ಮೂವರು ವಿಧಾನಸೌಧದಲ್ಲಿ ಪಾಕಿಸ್ತಾನ್ ಪರ (pro Pakistan) ಘೋಷಣೆ ಕೂಗಿದ್ದು ಸಾಬೀತಾಗಿದೆ ಮತ್ತು ಪೊಲೀಸರನ್ನು ಅವರೆಲ್ಲರನ್ನು ವಶಕ್ಕೆ ಪಡೆದಿದ್ದಾರೆ. ಅವರಲ್ಲೊಬ್ಬ ಮೊಹಮ್ಮದ್ ಶಫಿ ನಾಶಿಪುಡಿ (Mohammad Shafi Nashipudi) ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದವನು. ಅವನ ಮನೆ ಮತ್ತು ಕುಟುಂಬದ ಬಗ್ಗೆ ಹಾವೇರಿಯ ಟಿವಿ9 ವರದಿಗಾರ ಸಾಕಷ್ಟು ಮಾಹಿತಿಯನ್ನು ಈ ವಿಡಿಯೋ ವರದಿಯಲ್ಲಿ ಹೇಳಿದ್ದಾರೆ. ಶಫಿ ಸ್ಥಿತಿವಂತ ಕುಟುಂಬದವನು ಅನ್ನೋದು ಅವನ ಅರಮನೆಯಂಥ ಮನೆ ನೋಡಿದರೆ ಗೊತ್ತಾಗುತ್ತದೆ. ದಶಕಗಳಿಂದ ಇವನ ಕುಟುಂಬ ಮೆಣಸಿನಕಾಯಿ ವ್ಯಾಪಾರದಲ್ಲಿ ತೊಡಗಿದೆ. ಕಷ್ಟಪಟ್ಟು ದುಡಿದು ಹಣ ಸಂಪಾದಿಸಿದ್ದಾರೆ ಅಂತ ವರದಿಗಾರ ಹೇಳುತ್ತಾರಾದರೂ ಬ್ಯಾಡಗಿ ವರ್ತಕರ ಸಂಘ ಮತ್ತು ದಲ್ಲಾಳಿಗಳಿಗೆ ಸಾಕಷ್ಟು ಹಣ ಬಾಕಿಯುಳಿಸಿಕೊಂಡಿದ್ದು ಸಂಘದವರು ಶಫಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಶಫಿ ಮಾಡಿದ ಘನಂದಾರಿ ಕೆಲಸದಿಂದಾಗಿ ಅವನ ಕುಟುಂಬದ ಬೇರೆ ಸದಸ್ಯರು ಊರಲ್ಲಿ ಯಾರಿಗೂ ಮುಖ ತೋರಿಸದಂಥ ವಾತಾವರಣ ನಿರ್ಮಾಣವಾಗಿದೆ. ಅವರೆಲ್ಲ ಮನೆಯ ಮೇನ್ ಗೇಟ್ ಬೀಗ ಹಾಕಿ ಮನೆಯೊಳಗೆ ಕೂತುಬಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Budget Session: ಪಾಕಿಸ್ತಾನ್ ಪರ ಘೋಷಣೆ ಕೂಗಿರುವ ವ್ಯಕ್ತಿ ಯಾರೇ ಆಗಿರಲಿ, ಶಿಕ್ಷಿಸದೆ ಬಿಡಲ್ಲ: ಜಿ ಪರಮೇಶ್ವರ್, ಗೃಹ ಸಚಿವ