ವಾಹನ ಸವಾರನ ಮೇಲೆ ಗೂಳಿ ದಾಳಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಎದೆ ಝಲ್ ಎನಿಸುವ ದೃಶ್ಯ
ಚಿತ್ರದುರ್ಗ ನಗರದ ಐಯುಡಿಪಿ ಬಡಾವಣೆಯಲ್ಲಿ ಬೈಕ್ ಸವಾರರನ್ನು ಬೆನ್ನತ್ತಿ ಭಯ ಸೃಷ್ಟಿಸಿದ ಗೂಳಿ ವಿಡಿಯೋ ಸೆರೆಯಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರ ಮೇಲೆ ಗೂಳಿ ದಾಳಿಗೆ ಮುಂದಾಗಿದ್ದು ವಾಹನ ಬಿಟ್ಟು ಇಬ್ಬರೂ ಓಡಿದ್ದಾರೆ. ಅವರ ಬೆನ್ನು ಬಿದ್ದ ಗೂಳಿ ಅವರ ಹಿಂದೆ ಓಡಿದೆ. ಈ ದೃಶ್ಯ ಎದೆ ನಡುಗಿಸುವಂತಿದೆ.
ಚಿತ್ರದುರ್ಗ, ಮಾರ್ಚ್.05: ಚಿತ್ರದುರ್ಗ ನಗರದಲ್ಲಿ ಕಳೆದ ಒಂದು ವಾರದಿಂದ ಗೂಳಿ ಹಾವಳಿ ಹೆಚ್ಚಾಗಿದೆ. ಸದ್ಯ ಗೂಳಿ ದಾಳಿ ನಡೆಸಿರುವ ವಿಡಿಯೋ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು ಇದು ಅಲ್ಲಿನ ಜನರಲ್ಲಿ ಭಯ ಹುಟ್ಟಿಸಿದೆ. ಮನೆಯಿಂದ ಕಾಲು ಆಚೆ ಇಡಲು ಜನ ಭಯಪಡುವಂತಾಗಿದೆ. ಚಿತ್ರದುರ್ಗ ನಗರದ ಐಯುಡಿಪಿ ಬಡಾವಣೆಯಲ್ಲಿ ಬೈಕ್ ಸವಾರರನ್ನು ಬೆನ್ನತ್ತಿ ಭಯ ಸೃಷ್ಟಿಸಿದ ಗೂಳಿ ವಿಡಿಯೋ ಸೆರೆಯಾಗಿದೆ.
ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರ ಮೇಲೆ ಗೂಳಿ ದಾಳಿಗೆ ಮುಂದಾಗಿದ್ದು ವಾಹನ ಬಿಟ್ಟು ಇಬ್ಬರೂ ಓಡಿದ್ದಾರೆ. ಅವರ ಬೆನ್ನು ಬಿದ್ದ ಗೂಳಿ ಅವರ ಹಿಂದೆ ಓಡಿದೆ. ಈ ದೃಶ್ಯ ಎದೆ ನಡುಗಿಸುವಂತಿದೆ. ಕಳೆದ 1 ವಾರದಲ್ಲಿ ಹಲವರ ಮೇಲೆ ಈ ಗೂಳಿ ದಾಳಿ ನಡೆಸಿದೆ. ಗೂಳಿ ದಾಳಿಯಿಂದ ಗಾಯಗೊಂಡ ಇಬ್ಬರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲಾಡಳಿತ, ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಗೂಳಿ ಸೆರೆ ಹಿಡಿದು ಜನರ ಪ್ರಾಣ ಉಳಿಸುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ