Xiaomi 14 Civi: ಶಓಮಿ ರೆಡ್ಮಿ ಹೊಸ ಸ್ಮಾರ್ಟ್​ಫೋನ್ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆ

Xiaomi 14 Civi: ಶಓಮಿ ರೆಡ್ಮಿ ಹೊಸ ಸ್ಮಾರ್ಟ್​ಫೋನ್ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆ

ಕಿರಣ್​ ಐಜಿ
|

Updated on: Jul 31, 2024 | 10:47 AM

12GB RAM+512GB ಆವೃತ್ತಿ ಸ್ಮಾರ್ಟ್​ಫೋನ್​ಗೆ ದೇಶದಲ್ಲಿ ₹48,999 ದರವಿದೆ. ನೂತನ Xiaomi 14 Civi Limited Edition ಕುರಿತು ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.

ಶಓಮಿ ರೆಡ್ಮಿ ಮತ್ತು ಎಂಐ ಫೋನ್​ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಶಓಮಿ ಕಂಪನಿ ಎರಡು ಬ್ರ್ಯಾಂಡ್​ಗಳ ಹೆಸರಿನಲ್ಲಿ ಹಲವು ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಬಾರಿ ಶಓಮಿ 14 ಸರಣಿಯಲ್ಲಿ ಶಓಮಿ 14 ಸಿವಿ ಲಿಮಿಟೆಡ್ ಎಡಿಶನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಈ ಫೋನ್ ಜೂನ್ 12ರಂದೇ ಮಾರುಕಟ್ಟೆಗೆ ಬಿಡುಗಡೆಯಾಗಿದ್ದರೂ, ಈ ಬಾರಿ ಸೀಮಿತ ಆವೃತ್ತಿಯ ಹೊಸ ಫೋನ್ ಬಿಡುಗಡೆಯಾಗಿದೆ. 12 GB RAM + 512 GB ಆವೃತ್ತಿ ಸ್ಮಾರ್ಟ್​ಫೋನ್​ಗೆ ದೇಶದಲ್ಲಿ ₹48,999 ದರವಿದೆ. ನೂತನ Xiaomi 14 Civi Limited Edition ಕುರಿತು ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.