ಟಿವಿ ಮಾರ್ಕೆಟ್​ನಲ್ಲಿ ಹೆಸರು ಸ್ಥಾಪಿಸುವ ಪಣತೊಟ್ಟ ಶಾಮಿ ಸಂಸ್ಥೆಯಿಂದ ಮೂರು ವಿವಿಧ ಸೈಜಿನ ಸ್ಮಾರ್ಟ್ ಟಿವಿಗಳ ಲಾಂಚ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 27, 2021 | 7:10 PM

ಸ್ವಾರಸ್ಯಕರ ಸಂಗತಿಯೆಂದರೆ ಶಾಮಿ ಟಿವಿಗಳು ಈ ಸೆಗ್ಮಂಟ್ನಲ್ಲಿ ಅಪರೂಪವೆನಿಸಿರುವ ಡಾಲ್ಬಿ ವಿಷನ್ ಹೊಂದಿವೆ. Mi TV 5X ಮೇಲಿರುವ ಡಿಸ್ಪ್ಲೇ 30W/40W ಡಾಲ್ಬಿ ಅಟ್ಮೋಸ್ ಪವರ್ಡ್ ಸ್ಪೀಕರ್ಗಳ ಜೊತೆ ಬರುತ್ತವೆ.

ಮೊಬೈಲ್ ಫೋನ್​ಗಳ​ ಉತ್ಪಾದನೆಯಲ್ಲಿ ಶಾಮಿ ನಿಸ್ಸಂದೇಹವಾಗಿ ಬಹಳ ದೊಡ್ಡ ಹೆಸರು. ಕಂಪನಿಯು ಹಲವು ವರ್ಷಗಳಿಂದ ಟೆಲಿವಿಷನ್ಗಳನ್ನು ಸಹ ತಯಾರುಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಟಿವಿ ಸೆಗ್ಮೆಂಟ್ನಲ್ಲಿ ಶಾಮಿಯ ಮಾರ್ಕಟ್ ಶೇರ್ ಎಷ್ಟು ಎನ್ನುವುದರ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ ತನ್ನ ಬ್ರ್ಯಾಂಡ್ ಎಸ್ಟ್ಯಾಬ್ಲಿಷ್ ಮಾಡಲು ಅದು ಹೆಣಗುತ್ತಿದೆ. ಗುರುವಾರದಂದು ಸಂಸ್ಥೆಯು ಆಯೋಜಿಸಿದ ಶಾಮಿ ಸ್ಮಾರ್ಟರ್ ಲಿವಿಂಗ್ 2022 ಕಾರ್ಯಕ್ರಮದಲ್ಲಿ ಅದು ತನ್ನ ಕೆಲ ಹೊಸ ಉತ್ಪಾದನೆಗಳ ಜೊತೆಗೆ ಬೇರೆ ಬೇರೆ ಸೈಜುಗಳ Mi TV 5X ಟಿವಿಗಳನ್ನು ಸಹ ಲಾಂಚ್ ಮಾಡಿತು. 43, 50 ಮತ್ತು 55 ಇಂಚ್ ಸೈಜ್ಗಳಲ್ಲಿ Mi TV 5X ಟಿವಿಗಳನ್ನು ಲಾಂಚ್ ಮಾಡಿದೆ. ಈ ಟಿವಿಗಳು 4ಕೆ ಹೆಚ್ಡಿಆರ್ ಡಿಸ್ಪ್ಲೇ ಮತ್ತು 3840X2160 ಪಿಕ್ಸೆಲ್ ನೊಂದಿಗೆ ಬರುತ್ತವೆ.

ಸ್ವಾರಸ್ಯಕರ ಸಂಗತಿಯೆಂದರೆ ಶಾಮಿ ಟಿವಿಗಳು ಈ ಸೆಗ್ಮಂಟ್ನಲ್ಲಿ ಅಪರೂಪವೆನಿಸಿರುವ ಡಾಲ್ಬಿ ವಿಷನ್ ಹೊಂದಿವೆ. Mi TV 5X ಮೇಲಿರುವ ಡಿಸ್ಪ್ಲೇ 30W/40W ಡಾಲ್ಬಿ ಅಟ್ಮೋಸ್ ಪವರ್ಡ್ ಸ್ಪೀಕರ್ಗಳ ಜೊತೆ ಬರುತ್ತವೆ.

ಇದಲ್ಲದೆ, ಟಿವಿಯು ಕ್ವಾಡ್-ಕೋರ್ ಎ 55 ಸಿಪಿಯುನಿಂದ ಮಾಲಿ ಜಿ 52 ಎಂಪಿ 2 ಜಿಪಿಯು ಅನ್ನು ಹೊಂದಿದೆ. ಚಿಪ್‌ಸೆಟ್ ಅನ್ನು 2 ಜಿಬಿ ಆರ್ ಎ ಎಮ್ ಮತ್ತು 16 ಜಿಬಿ ಸಂಗ್ರಹದೊಂದಿಗೆ ಜೋಡಿಸಲಾಗಿದೆ. ಇದು ಎಚ್ ಡಿ ಎಮ್ ಐ, ಯೂ ಎಸ್ ಬಿ, ಈಥರ್ನೆಟ್, 3.5 ಎಮ್ ಎಮ್ ಜಾಕ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಸಾಕಷ್ಟು ಪೋರ್ಟ್ ಆಯ್ಕೆಗಳೊಂದಿಗೆ ಬರುತ್ತದೆ. ಶಾಮಿ 43-ಇಂಚಿನ ಮಾಡೆಲ್ ಬೆಲೆಯನ್ನು ರೂ. 31,999 ಕ್ಕೆ ನಿಗದಿಪಡಿಸಲಾಗಿದೆ. 50-ಇಂಚು ಮತ್ತು 55-ಇಂಚಿನ ಮಾಡೆಲ್ಗಳ ಬೆಲೆ ಕ್ರಮವಾಗಿ ರೂ. 41,999 ಮತ್ತು ರೂ. 47,999 ಕ್ಕೆ ಆಗಿರುತ್ತದೆ.

ಇದನ್ನೂ ಓದಿ:  ಈ ಮಾರ್ಕೆಟ್​ನಲ್ಲಿ ಸಂಶೋಧನಾ ಪ್ರಬಂಧಗಳು ಮಾರಾಟಕ್ಕಿವೆ!; ರಹಸ್ಯ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ