AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಷ್ಟಪಟ್ಟು ಆಗುವ ಮಿಲನ ಬೇರೆ, ಆದರೆ ಇದು ರೇಪ್​; ದಯವಿಟ್ಟು ಖಂಡಿಸಿ’: ಗ್ಯಾಂಗ್​ ರೇಪ್​ ಬಗ್ಗೆ ಹರ್ಷಿಕಾ ಮಾತು

‘ಇಷ್ಟಪಟ್ಟು ಆಗುವ ಮಿಲನ ಬೇರೆ, ಆದರೆ ಇದು ರೇಪ್​; ದಯವಿಟ್ಟು ಖಂಡಿಸಿ’: ಗ್ಯಾಂಗ್​ ರೇಪ್​ ಬಗ್ಗೆ ಹರ್ಷಿಕಾ ಮಾತು

TV9 Web
| Updated By: ಮದನ್​ ಕುಮಾರ್​

Updated on: Aug 27, 2021 | 5:13 PM

‘ಹೆಣ್ಣು ದೇವರಿಗೆ ಸಮಾನ, ತಾಯಿಗೆ ಸಮಾನ. ಹೆಣ್ಣನ್ನು ಪೂಜೆ ಮಾಡುವ ಭಾರತದಲ್ಲಿ ಹೆಣ್ಣಿನ ಮೇಲೆ ಶೋಷಣೆ ಆದಾಗ ಖಂಡಿಸೋಣ. ರೇಪ್​ ಮಾಡಿದ 6 ಜನರಿಗೆ ಕಠೋರ ಶಿಕ್ಷೆ ಆಗಬೇಕು’ ಎಂದು ಹರ್ಷಿಕಾ ಹೇಳಿದ್ದಾರೆ.

ಮೈಸೂರಿನಲ್ಲಿ ನಡೆದ ಗ್ಯಾಂಗ್​ ರೇಪ್ (Mysore Gang Rape)​ ನಿಜಕ್ಕೂ ಅಮಾನವೀಯ. ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಅವರು ವಿಡಿಯೋ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಮೈಸೂರಿನ ಹುಡುಗಿಯ ಮೇಲೆ ಆರು ಜನರು ಸೇರಿಕೊಂಡು ಗ್ಯಾಂಗ್​ ರೇಪ್​ ಮಾಡುತ್ತಾರೆ ಎಂದರೆ ನಾವು ಯಾವ ಕಾಲದಲ್ಲಿ ಬದುಕುತ್ತಿದ್ದೇವೆ ಎಂಬುದೇ ಗೊತ್ತಾಗುತ್ತಿಲ್ಲ. ಈಗಲೂ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ. ಹೆದರಿಕೆ ಆಗಲು ಪ್ರಾರಂಭ ಆಗಿದೆ. ನಿಮ್ಮ ಸುತ್ತಮುತ್ತ ಹೆಣ್ಣುಮಕ್ಕಳ ಮೇಲೆ ಶೋಷಣೆ ಆಗುತ್ತಿದೆ ಎಂದಾಗ ದಯವಿಟ್ಟು ರಕ್ಷಣೆ ಮಾಡಿ. ಯಾಕೆಂದರೆ ಹೆಣ್ಣು ದೇವರಿಗೆ ಸಮಾನ, ತಾಯಿಗೆ ಸಮಾನ. ಹೆಣ್ಣನ್ನು ಪೂಜೆ ಮಾಡುವ ಭಾರತದಲ್ಲಿ ಹೆಣ್ಣಿನ ಮೇಲೆ ಶೋಷಣೆ ಆದಾಗ ಖಂಡಿಸೋಣ. ರೇಪ್​ ಮಾಡಿದ 6 ಜನರಿಗೆ ಕಠೋರ ಶಿಕ್ಷೆ ಆಗಬೇಕು’ ಎಂದು ಹರ್ಷಿಕಾ ಹೇಳಿದ್ದಾರೆ.

‘ಹುಡುಗಿ ಬೇಡ ಎಂದು ಹೇಳಿದರೆ ಬೇಡ ಎಂದೇ ಅರ್ಥ. ಇಷ್ಟಪಟ್ಟು ಆಗುವಂತಹ ಮಿಲನ ಬೇರೆ. ಆದರೆ ಇದು ರೇಪ್​. ಇದು ಖಂಡಿತವಾಗಿಯೂ ತಪ್ಪು. ಸರ್ಕಾರ ಈ ವಿಷಯಕ್ಕೆ ಹೆಚ್ಚು ಮಹತ್ವ ಕೊಡಬೇಕು. ಸಂತ್ರಸ್ತ ಯುವತಿಗೆ ನ್ಯಾಯ ಸಿಗಬೇಕು’ ಎಂದು ಹರ್ಷಿಕಾ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:

‘ನಾಳೆ ನಮ್ಮ-ನಿಮ್ಮೆಲ್ಲರ ತಂಗಿ-ತಾಯಿಗೂ ಹೀಗಾಗಬಹುದು; ಎಚ್ಚೆತ್ತುಕೊಳ್ಳಿ’: ಮೈಸೂರು​ ಗ್ಯಾಂಗ್ ರೇಪ್​ಗೆ ಅದಿತಿ ಆಕ್ರೋಶ

ಆ ಹುಡುಗಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಿದ್ದಳೋ -ಮೈಸೂರು ಗ್ಯಾಂಗ್ ರೇಪ್ ಬಗ್ಗೆ ಮಂಜುಳಾ ಮಾನಸ ಉಡಾಫೆ ಮಾತು