ಯಾದಗಿರಿ: ಬಿಜೆಪಿ ಮುಖಂಡನ ಸೋದರನ ರೈಸ್ ಮಿಲ್​ನಲ್ಲಿ 700 ಕ್ವಿಂಟಾಲ್ ಅಕ್ಕಿ ಜಪ್ತಿ

| Updated By: ಆಯೇಷಾ ಬಾನು

Updated on: Dec 30, 2023 | 2:06 PM

ಚಿತ್ತಾಪುರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್​ಗೆ ಸೇರಿದ ರೈಸ್ ಮಿಲ್ ನಲ್ಲಿ ಬರೋಬ್ಬರಿ 700 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಕಳೆದ 15 ದಿನಗಳಿಂದ ತಲೆ ಮರಿಸಿಕೊಂಡಿರುವ ರಾಜು ರಾಠೋಡ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಯಾದಗಿರಿ, ಡಿ.30: ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಪಡಿತರ ಅಕ್ಕಿ (Ration Rice) ಕಳ್ಳತನ ಕೇಸ್​​ಗೆ ಟ್ವಿಸ್ಟ್ ಸಿಕ್ಕಿದೆ. ಚಿತ್ತಾಪುರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್​ಗೆ ಸೇರಿದ ರೈಸ್ ಮಿಲ್ ನಲ್ಲಿ ಬರೋಬ್ಬರಿ 700 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ (Rice Seized). ಜಿಲ್ಲೆಯ ಗುರುಮಠಕಲ್​ನಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ರೈಸ್ ಮಿಲ್​ನಿಂದ ಅಕ್ಕಿ ಜಪ್ತಿ ಮಾಡಲಾಗಿದೆ. ಸುರಪುರ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ನೇತೃತ್ವದಲ್ಲಿ ನಡೆದ ದಾಳಿ ವೇಳೆ ಪಾಲಿಶ್ ಮಾಡಿದ್ದ 630 ಕ್ವಿಂಟಾಲ್ ಪಡಿತರ ಅಕ್ಕಿ ಸೇರಿ 700 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ.

630 ಕ್ವಿಂಟಾಲ್ ಪಾಲಿಶ್ ಮಾಡಿರೋ ಪಡಿತರ ಅಕ್ಕಿಯ ಜೊತೆಗೆ ಪಾಲಿಶ್ ಮಾಡಲು ರೆಡಿ ಮಾಡಿಟ್ಟುಕೊಂಡಿದ್ದ 70 ಕ್ವಿಂಟಾಲ್ ಅಕ್ಕಿ‌ ವಶಕ್ಕೆ ಪಡೆಯಲಾಗಿದೆ. ಸದ್ಯ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳು ರಾಜು ರಾಠೋಡ್ ಗೆ ಅಕ್ಕಿ ಮಾರಾಟ ಮಾಡಿರೋದಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಕಳೆದ 15 ದಿನಗಳಿಂದ ತಲೆ ಮರಿಸಿಕೊಂಡಿರುವ ರಾಜು ರಾಠೋಡ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:05 pm, Sat, 30 December 23

Follow us on