‘ಮತ್ತೆ ಮೊದಲಿನ ಆಟ ಶುರುವಾಗಲಿದೆ’; ಎಚ್ಚರಿಕೆ ಕೊಟ್ಟ ಕಿಚ್ಚ ಸುದೀಪ್
ಸ್ಪರ್ಧಿಗಳು ಕುಟುಂಬದವರ ಜೊತೆ ಮಾತನಾಡಿ ಹಾಯಾಗಿ ಸಮಯ ಕಳೆದಿದ್ದರು. ಸ್ಪರ್ಧಿಗಳು ಇನ್ನೂ ಇದೇ ಹ್ಯಾಂಗೋವರ್ನಲ್ಲಿ ಇದ್ದಾರೆ. ಇದರಿಂದ ಹೊರ ಬರುವಂತೆ ಸುದೀಪ್ ಪರೋಕ್ಷವಾಗಿ ಸೂಚಿಸಿದ್ದಾರೆ.
ಬಿಗ್ ಬಾಸ್ನಲ್ಲಿ ಸ್ಪರ್ಧಿಗಳು ಈ ವಾರ ಚಿಲ್ ಆಗಿದ್ದರು. ಕುಟುಂಬದವರು ಬಿಗ್ ಬಾಸ್ ಮನೆಗೆ ಬಂದಿದ್ದರು. ಹೀಗಾಗಿ ಸ್ಪರ್ಧಿಗಳು ಅವರ ಜೊತೆ ಮಾತನಾಡಿ ಹಾಯಾಗಿ ಸಮಯ ಕಳೆದಿದ್ದರು. ಸ್ಪರ್ಧಿಗಳು ಇನ್ನೂ ಇದೇ ಹ್ಯಾಂಗೋವರ್ನಲ್ಲಿ ಇದ್ದಾರೆ. ಇದರಿಂದ ಹೊರ ಬರುವಂತೆ ಸುದೀಪ್ (Sudeep) ಪರೋಕ್ಷವಾಗಿ ಸೂಚಿಸಿದ್ದಾರೆ. ಎಲ್ಲರಿಗೂ ಬಂದ ತಕ್ಷಣ ಕಾಫಿ ಕಪ್ ಸಿಕ್ಕಿದೆ. ಇದರ ಅರ್ಥ ಏನು ಎಂಬುದನ್ನು ಸುದೀಪ್ ವಿವರಿಸಿದ್ದಾರೆ. ‘ಮನೆಯವರು ಬಂದರು ಹೋದರು. ನಾವು ಮೊದಲಿನ ರೀತಿ ಮಾತು ಆರಂಭಿಸೋಣ’ ಎಂದು ಸುದೀಪ್ ಹೇಳಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಸಂಚಿಕೆ ಇಂದು (ಡಿಸೆಂಬರ್ 30) ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos