Yadgir: ಕಡಿಮೆ ಬಡ್ಡಿ ದರದೊಂದಿಗೆ ಸಾಲ ಕೊಡಿಸುವ ನೆಪದಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ತಂಡ ಯಾದಗಿರಿ ಪೊಲೀಸ್ ಬಲೆಗೆ!
ಪೊಲೀಸರ ವಿಶೇಷ ತಂಡವೊಂದು ಧೂರ್ತರ ಜಾಡು ಹಿಡಿದು ಮುಂಬೈಗೆ ತೆರಳಿ ಅವರನ್ನು ಯಾದಗಿರಿಗೆ ಎಳೆ ತಂದಿದೆ.
ಯಾದಗಿರಿ: ಮೋಸ ಹೋಗುವವರು ಇರುವಲ್ಲಿ ಮೋಸಗಾರರು ಇದ್ದೇ ಇರುತ್ತಾರೆ ಅನ್ನೋ ಮಾತಿದೆ. ವಂಚಕರ, ವಂಚನೆಗಳ (fraud) ಅದೆಷ್ಟೋ ವರದಿಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡರೂ ಜನ ಮೋಸ ಹೋಗುವ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ಅಮಾಯಕ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ನಾಲ್ವರ ತಂಡವೊಂದು ನಗರದ ಪೊಲೀಸ್ ಬಲೆಗೆ ಬಿದ್ದಿದೆ. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಡಾ ಸಿಬಿ ವೇದಮೂರ್ತಿ (Dr CB Vedamurthy) ಹೇಳುವ ಪ್ರಕಾರ ಸಂತೋಷ್ ರಾಠೋಡ್, ಪಾಂಡು ಹೀರಾ ಸಿಂಗ್, ಮಹಬೂಬ್ ಮತ್ತು ರಹೀಮ್ ಸಾಬ್ ಹೆಸರಿನ ಖೂಳರ ವಿರುದ್ಧ ಎಫ್ ಐ ಅರ್ (FIR) ದಾಖಲಾದ ಕೂಡಲೇ ಮುಂಬೈಗೆ ಪರಾರಿಯಾಗಿದ್ದರು. ಪೊಲೀಸರ ವಿಶೇಷ ತಂಡವೊಂದು ಧೂರ್ತರ ಜಾಡು ಹಿಡಿದು ಮುಂಬೈಗೆ ತೆರಳಿ ಅವರನ್ನು ಎಳೆ ತಂದಿದೆ. ಟಿವಿ9 ಕನ್ನಡ ವಾಹಿನಿ ವಂಚಕರ ತಂಡದ ಬಗ್ಗೆ ಒಂದು ವಿಸ್ತೃತ ವರದಿ ಜಾರಿ ಮಾಡಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ