ಅಂತು ಇಂತು ತಡವಾಗಿ ಬಂದ ರೈಲು: ನಿಟ್ಟುಸಿರು ಬಿಟ್ಟ ಯಾದಗಿರಿಯ 200 ಹೋಂ ಗಾರ್ಡ್ಸ್

ಅಂತು ಇಂತು ತಡವಾಗಿ ಬಂದ ರೈಲು: ನಿಟ್ಟುಸಿರು ಬಿಟ್ಟ ಯಾದಗಿರಿಯ 200 ಹೋಂ ಗಾರ್ಡ್ಸ್

ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ

Updated on: Nov 13, 2023 | 3:04 PM

ನ. 17 ರಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆ ಯಾದಗಿರಿ ಜಿಲ್ಲೆಯ 200 ಗೃಹ ರಕ್ಷಕರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ರೈಲ್ವೆ ​ ಮೂಲಕ ಮಧ್ಯಪ್ರದೇಶಕ್ಕೆ ತೆರಳಬೇಕಿತ್ತು. ಇಂದು ಬೆಳಿಗ್ಗೆ 11 ಗಂಟೆಗೆ ಟ್ರೈನ್ ತಡವಾಗಿ ಬಂದಿದ್ದು, ಹೋಂ ಗಾರ್ಡ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. 

ಯಾದಗಿರಿ, ನವೆಂಬರ್​​​​​​ 13: ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಹೋಂ ಗಾರ್ಡ್​ಗಳು (Home Guards) ರೈಲು ಬಾರದ್ದಕ್ಕೆ ರಾತ್ರಿ ಇಡೀ ಯಾದಗಿರಿ ರೈಲ್ವೆ ನಿಲ್ದಾಣದಲ್ಲೇ ಮಲಗಿರುವಂತಹ  ಘಟನೆ ನಡೆದಿದೆ. ನ. 17 ರಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆ ಯಾದಗಿರಿ ಜಿಲ್ಲೆಯ 200 ಗೃಹ ರಕ್ಷಕರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ರೈಲ್ವೆ ​ ಮೂಲಕ ಮಧ್ಯಪ್ರದೇಶಕ್ಕೆ ತೆರಳಬೇಕಿತ್ತು. ಆದರೆ ನಿನ್ನೆಯಿಂದ ರೈಲಿಗಾಗಿ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಕಾಯ್ದು 200 ಗೃಹ ರಕ್ಷಕರು ಹೈರಾಣಾಗಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಟ್ರೈನ್ ತಡವಾಗಿ ಬಂದಿದ್ದು, ಹೋಂ ಗಾರ್ಡ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.