ಯಶ್ ಗೆಳೆಯ ಅಶೋಕ್​ಗೆ ಸಿಕ್ತು ಹೊಸ ಧಾರಾವಾಹಿ ಚಾನ್ಸ್

Updated on: Nov 29, 2025 | 9:15 AM

ಯಶ್ ಅವರ ಗೆಳೆಯ ಅಶೋಕ್ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಅವರು ತಮ್ಮ ಗೆಳೆತನದ ಬಗ್ಗೆ ಅನೇಕ ಬಾರಿ ಹೇಳಿಕೊಂಡಿದ್ದರು. ಅಶೋಕ್​ಗೆ ಸಿನಿಮಾ ಆಫರ್ ಕೊಡಿಸಿದ್ದು ಕೂಡ ಯಶ್ ಅವರೇ. ಈ ಬಗ್ಗೆ ಅನೇಕ ಬಾರಿ ಅವರು ಹೇಳಿಕೊಂಡಿದ್ದರು. ಈಗ ಅವರು ಹೊಸ ಧಾರಾವಾಹಿ ಮಾಡಿದ್ದಾರೆ. 

ಯಶ್ ಅವರ ಗೆಳೆಯ ಅಶೋಕ್ ಶರ್ಮಾ ಅವರು ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಶೋಕ್ ಅವರು ಕೊನೆಯದಾಗಿ ‘ಸೀತಾ ರಾಮ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಕಥಾ ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸಿದ್ದರು. ಈಗ ಅಶೋಕ್​ಗೆ ಹೊಸ ಧಾರಾವಾಹಿ ಆಫರ್ ಸಿಕ್ಕಿದೆ. ಜೀ ಕನ್ನಡದಲ್ಲಿ ‘ಆದಿ ಲಕ್ಷ್ಮೀ ಪುರಾಣ’ದಲ್ಲಿ ಅವರು ನಟಿಸುತ್ತಿದ್ದಾರೆ. ಈ ಧಾರಾವಾಹಿ ಡಿಸೆಂಬರ್ 8ರಿಂದ ರಾತ್ರಿ 9ಕ್ಕೆ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Nov 29, 2025 09:13 AM