ಧಾರಾವಾಹಿಯಲ್ಲಿ ನಟಿಸೋದು ಏಕೆ ಹೆಚ್ಚು ಇಷ್ಟ? ವಿವರಿಸಿದ ಅಶೋಕ್
ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ ಅನುಭವ ಅಶೋಕ್ಗೆ ಇದೆ. ಅವರು ಯಶ್ ಅವರು ಆಪ್ತ ಗೆಳೆಯ. ಈಗ ಅವರು ‘ಆದಿ ಲಕ್ಷ್ಮೀ ಪುರಾಣ’ ಹೆಸರಿನ ಹೊಸಾಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ಅಣ್ಣನಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಧಾರಾವಾಹಿಯಲ್ಲಿ ನಟಿಸಲು ಕಾರಣ ನೀಡಿದ್ದಾರೆ.
ನಟ ಯಶ್ ಅವರ ಗೆಳೆಯ ಅಶೋಕ್ ಅವರು ಇತ್ತೀಚೆಗೆ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ‘ಆದಿ ಲಕ್ಷ್ಮೀ ಪುರಾಣ’ ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ. ಡಿಸೆಂಬರ್ 8ರಿಂದ ಧಾರಾವಾಹಿ ಪ್ರಸಾರ ಆರಂಭಿಸಿದೆ. ಅವರು ಧಾರಾವಾಹಿಯಲ್ಲಿ ಬ್ಯುಸಿ ಆಗಲು ಕಾರಣ ನೀಡಿದ್ದಾರೆ. ‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ರಿಲೀಸ್ ಆಗಿ 10 ವರ್ಷ ಆಯ್ತು. ಯಶ್ ಗೆಳೆಯನ ಪಾತ್ರ ಮಾಡಿದ್ದೇನೆ. ಸಿನಿಮಾ ಅವಧಿ ಲಿಮಿಟೆಡ್. ಹೀಗಾಗಿ ಪಾತ್ರವನ್ನು ಹೆಚ್ಚು ಅನ್ವೇಷಿಸೋಕೆ ಆಗಲ್ಲ. ಸೀತಾ ರಾಮದಲ್ಲಿ ನಾನು ರಾಮ್ನ ಗೆಳೆಯನ ಪಾತ್ರ ಮಾಡಿದೆ. ಗೆಳೆಯ ಇದ್ರೆ ಹೀಗೆ ಇರಬೇಕು ಎಂದು ಹೇಳುತ್ತಾರೆ. ಅಲ್ಲಿ ಅನ್ವೇಷಿಸಲು ಹೆಚ್ಚು ಅವಕಾಶ ಇರುತ್ತದೆ’ ಎಂದಿದ್ದಾರೆ ಅಶೋಕ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
