ಆ ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ

Edited By:

Updated on: Feb 02, 2026 | 10:42 PM

ಹಾಸನದಲ್ಲಿನ ಜಮೀನಿಗೆ ಸಂಬಂಧಿಸಿದಂತೆ ಯಶ್ ತಾಯಿ ಪಷ್ಪಾ ಅರುಣ್ ಕುಮಾರ್ ಅವರು ಕಾನೂನಿನ ಹೋರಾಟ ಮಾಡುತ್ತಿದ್ದಾರೆ. ಯಶ್ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಅವರಿಗೆ ಈ ಚಿಕ್ಕ ಸೈಟ್ ಏನೇನೂ ಅಲ್ಲ. ಹಾಗಿದ್ದರೂ ಪುಷ್ಪಾ ಹಠ ಹಿಡಿದಿರುವುದು ಏಕೆ ಎನ್ನುವ ಪ್ರಶ್ನೆ ಎಲ್ಲರಿಗೂ ಇದೆ.

ಹಾಸನದಲ್ಲಿ ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಯಶ್ (Yash) ತಾಯಿ ಪಷ್ಪಾ ಅರುಣ್ ಕುಮಾರ್ ಅವರು ಕಾನೂನಿನ ಹೋರಾಟ ಮುಂದುವರಿಸಿದ್ದಾರೆ. ಯಶ್ ಅವರು ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಅವರಿಗೆ ಈ ಚಿಕ್ಕ ಸೈಟ್ ಏನೇನೂ ಅಲ್ಲ. ಹಾಗಿದ್ದರೂ ಕೂಡ ಪುಷ್ಪಾ ಅವರು ಹಠ ಹಿಡಿದಿರುವುದು ಯಾಕೆ ಎಂಬ ಪ್ರಶ್ನೆ ಎಲ್ಲರಿಗೂ ಇದೆ. ಅದಕ್ಕೆ ಅವರೇ ಈಗ ಉತ್ತರ ನೀಡಿದ್ದಾರೆ. ‘ನಾನು ಅರುಣ್ ಕುಮಾರ್ ಹೆಂಡತಿ ಆಗಿ ಮಾತನಾಡುತ್ತಿದ್ದೇನೆ. ಯಶ್ ಅಮ್ಮನಾಗಿ ಮಾತನಾಡುತ್ತಿಲ್ಲ. ಯಶ್ ಇಂದು ಕೋಟಿಗಟ್ಟಲೆ ದುಡಿಯುತ್ತಿರಬಹುದು. ಅವನಿಗೆ ಇದು ಚಿಕ್ಕದು ಆಗಿರಬಹುದು. ಆದರೆ ಎಲ್ಲ ಸಾರ್ವಜನಿಕರಿಗೆ ಇದು ಗೊತ್ತಾಗಬೇಕು. ಯಾರೂ ಕೂಡ ಹೆದರಿಕೊಂಡು ಬಿಟ್ಟುಬರಬಾರದು. ನಾನು ಹೆದರಿಕೊಂಡು ಬಿಟ್ಟುಹೋದರೆ ಎಲ್ಲರೂ ಇದೇ ರೀತಿ ಹೆದರಿಕೊಂಡು ಬಿಟ್ಟು ಹೋಗಬೇಕಾಗುತ್ತದೆ’ ಎಂದು ಪುಷ್ಪಾ ಅರುಣ್​ ಕುಮಾರ್ (Pushpa Arun Kumar) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More