ಕೋರ್ಟ್ ತೀರ್ಪಿನ ಬಳಿಕ ಖಡಕ್ ನಿರ್ಧಾರ ತೆಗೆದುಕೊಂಡ ಯಶ್ ತಾಯಿ ಪುಷ್ಪಾ

Edited By:

Updated on: Feb 16, 2026 | 11:06 PM

‘ರಾಕಿಂಗ್ ಸ್ಟಾರ್’ ಯಶ್ ಅವರ ತಾಯಿ ಹಾಸನದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲು ಏರಿದ್ದರು. ಅಲ್ಲಿ ಅವರ ಪರವಾಗಿ ಆದೇಶ ಬಂದಿದೆ. ಆ ಬಳಿಕ ಅವರು ಮಾಧ್ಯಮದ ಎದುರು ಪ್ರತಿಕ್ರಿಯೆ ನೀಡಿದ್ದಾರೆ. ಕೇಸ್ ಕುರಿತಂತೆ ಅವರು ಮಾತನಾಡಿದ ವಿಡಿಯೋ ಇಲ್ಲಿದೆ..

‘ರಾಕಿಂಗ್ ಸ್ಟಾರ್’ ಯಶ್ (Yash) ಅವರ ತಾಯಿ ಹಾಸನದಲ್ಲಿ ಸೈಟ್ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲು ಏರಿದ್ದರು. ಅಲ್ಲಿ ಅವರ ಪರವಾಗಿ ಆದೇಶ ಬಂದಿದೆ. ಆ ಬಳಿಕ ಅವರು ಮಾಧ್ಯಮದ ಎದುರು ಪ್ರತಿಕ್ರಿಯೆ ನೀಡಿದ್ದಾರೆ. ‘ನ್ಯಾಯಾಲಯ ನಮ್ಮ ಪರವಾಗಿ ಆದೇಶ ನೀಡಿದೆ ಅಂತ ನಾನು ಸುಮ್ಮನೆ ಇರಲ್ಲ. ಇದನ್ನು ನಾನು ಇಲ್ಲಿಗೆ ಬಿಡಲ್ಲ. ನಾನು ಕಷ್ಟಪಟ್ಟು ಕಟ್ಟಿದ ಮನೆಯಲ್ಲಿ ಒಡೆದಿದ್ದಾರೆ. ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲೇ ಬೇಕು. ಇಂದಿನ ತನಕ ಜೆಸಿಬಿ ಸೀಜ್ ಆಗಿಲ್ಲ. ನನಗೆ ಅವಮಾನ ಆಗಿದೆ. ನಾನು ಇದನ್ನು ಒಂದು ಸವಾಲಾಗಿ ಸ್ವೀಕರಿಸುತ್ತೇನೆ. ಎಸ್​​ಪಿ ಆಫೀಸ್​​ಗೆ ಹೋಗಿ ನಾನು ದೂರು ನೀಡುತ್ತೇನೆ’ ಎಂದು ಪುಷ್ಪಾ ಅರುಣ್ ಕುಮಾರ್ (Pushpa) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.