ಯಶ್ ಮಾತಿಗೆ ಕಣ್ಣೀರು ಹಾಕಿದ ಶಿವರಾಜ್ಕುಮಾರ್
‘ಕೆಜಿಎಫ್ 2’ ಚಿತ್ರ ಟ್ರೇಲರ್ ರಿಲೀಸ್ ಆಗಿದೆ. ಅದ್ದೂರಿಯಾಗಿ ಈ ಕಾರ್ಯಕ್ರಮ ನೆರವೇರಿದೆ. ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಟ್ರೇಲರ್ ಲಾಂಚ್ ನಡೆದಿದೆ. ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ಯಶ್ ಮಾತನಾಡಿದ್ದಾರೆ.
‘ಕೆಜಿಎಫ್ 2’ ಚಿತ್ರ (KGF Chapter 2) ಟ್ರೇಲರ್ ರಿಲೀಸ್ ಆಗಿದೆ. ಅದ್ದೂರಿಯಾಗಿ ಈ ಕಾರ್ಯಕ್ರಮ ನೆರವೇರಿದೆ. ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಟ್ರೇಲರ್ ಲಾಂಚ್ ನಡೆದಿದೆ. ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ಯಶ್ ಮಾತನಾಡಿದ್ದಾರೆ. ‘ಅಪ್ಪು ಸರ್ನ ನಾವು ಮಿಸ್ ಮಾಡಿಕೊಳ್ತಾ ಇದೀವಿ. ಹೊಂಬಾಳೆ (Hombale Films) ಸ್ಟಾರ್ಟ್ ಆಗಿದ್ದು ಅಪ್ಪು ಅವರ ಚಿತ್ರದಿಂದ. ಶಿವಣ್ಣ ಇಲ್ಲಿದ್ದಾರೆ. ಅವರು ಅಳ್ತಾ ಇರೋದನ್ನು ನೋಡೋಕಾಗಲ್ಲ. ಪುನೀತ್ ಯಾವಾಗಲೂ ಜೀವಂತ. ಅವರ ಪ್ರೀತಿ ನಮ್ಮ ಹೃದಯದಲ್ಲಿರುತ್ತದೆ. ಶಿವಣ್ಣ ನೀವು ಹಾಕಿ ಕೊಟ್ಟಿರುವ ಮಾರ್ಗದರ್ಶನದಲ್ಲಿ ನಾವು ಮುಂದೆ ನಡಿತೀವಿ’ ಎಂದರು ರಾಕಿಂಗ್ ಸ್ಟಾರ್. ಯಶ್ (Yash) ಮಾತನ್ನು ಕೇಳಿ ಶಿವರಾಜ್ಕುಮಾರ್ ಕಣ್ಣಲ್ಲಿ ನೀರು ಬಂದಿದೆ. ಶಿವರಾಜ್ಕುಮಾರ್ ಈ ಮೊದಲು ಕೂಡ ಅಪ್ಪು ಅವರನ್ನು ನೆನೆಪಿಸಿಕೊಂಡು ಅತ್ತಿದ್ದಾರೆ.
ಇದನ್ನೂ ಓದಿ:
‘ಕೆಜಿಎಫ್ 2’ ವೀಕ್ಷಿಸಿದ್ದಾರೆ ರಾಧಿಕಾ ಪಂಡಿತ್; ಸಿನಿಮಾ ಬಗ್ಗೆ ಅವರು ಹೇಳಿದ್ದಿಷ್ಟು
‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್ ಚಾಪ್ಟರ್ 2’ ಟ್ರೇಲರ್ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್