ನಟ ಸುಶಾಂತ್ ಸಿಂಗ್ ಕೇಸ್​ಗೂ ಕಾರ್ಪೊರೇಟರ್ ಪುತ್ರನಿಗೂ ಇದ್ಯಾ ಲಿಂಕ್?

[lazy-load-videos-and-sticky-control id=”qcf2dJB7OkY”] ಬೆಂಗಳೂರು: ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಡ್ರಗ್ಸ್ ಪ್ರಕರಣಕ್ಕೂ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೇಸ್​ಗೂ ಸಂಬಂಧವಿದೆ ಎಂಬ ಮಾತುಗಳು ಕೇಳಿಬಂದಿದೆ. ಜೊತೆಗೆ, ಇದರಲ್ಲಿ ಕಾರ್ಪೊರೇಟರ್ ಪುತ್ರ ಯಶಸ್​ಗೂ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ ಮುಂಬೈನಲ್ಲಿ NCB ಅಧಿಕಾರಿಗಳಿಂದ ಬಂಧಿತನಾಗಿರುವ ಡ್ರಗ್ಸ್ ಕಿಂಗ್​ಪಿನ್ ರೆಹಮಾನ್​ಗೂ ಯಶಸ್​ಗೂ ಇರುವ ಲಿಂಕ್​ ಎಂಬ ಮಾತು ಕೇಳಿಬಂದಿದೆ. ಸುಶಾಂತ್ ಸಿಂಗ್ ರಜಪೂತ್ ಕೇಸ್​ನಲ್ಲಿ ಬಂಧಿತರಾಗಿರುವ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಹಾಗೂ ಸುಶಾಂತ್ ಮ್ಯಾನೇಜರ್ […]

ನಟ ಸುಶಾಂತ್ ಸಿಂಗ್ ಕೇಸ್​ಗೂ ಕಾರ್ಪೊರೇಟರ್ ಪುತ್ರನಿಗೂ ಇದ್ಯಾ ಲಿಂಕ್?
Edited By:

Updated on: Sep 06, 2020 | 2:40 PM

[lazy-load-videos-and-sticky-control id=”qcf2dJB7OkY”]

ಬೆಂಗಳೂರು: ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಡ್ರಗ್ಸ್ ಪ್ರಕರಣಕ್ಕೂ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೇಸ್​ಗೂ ಸಂಬಂಧವಿದೆ ಎಂಬ ಮಾತುಗಳು ಕೇಳಿಬಂದಿದೆ. ಜೊತೆಗೆ, ಇದರಲ್ಲಿ ಕಾರ್ಪೊರೇಟರ್ ಪುತ್ರ ಯಶಸ್​ಗೂ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ ಮುಂಬೈನಲ್ಲಿ NCB ಅಧಿಕಾರಿಗಳಿಂದ ಬಂಧಿತನಾಗಿರುವ ಡ್ರಗ್ಸ್ ಕಿಂಗ್​ಪಿನ್ ರೆಹಮಾನ್​ಗೂ ಯಶಸ್​ಗೂ ಇರುವ ಲಿಂಕ್​ ಎಂಬ ಮಾತು ಕೇಳಿಬಂದಿದೆ.

ಸುಶಾಂತ್ ಸಿಂಗ್ ರಜಪೂತ್ ಕೇಸ್​ನಲ್ಲಿ ಬಂಧಿತರಾಗಿರುವ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಹಾಗೂ ಸುಶಾಂತ್ ಮ್ಯಾನೇಜರ್ ಸ್ಯಾಮುಯೆಲ್​ ಮಿರಂಡಾಗೆ ಡ್ರಗ್ಸ್ ಒದಗಿಸುತ್ತಿದದ್ದು ಇದೇ ರೆಹಮಾನ್. ಈತ ದೇಶದ ಪ್ರತಿಷ್ಠಿತ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಪ್ರಮುಖ ಡ್ರಗ್ ಪೆಡ್ಲರ್. ಅಲ್ಲದೆ ಯಶಸ್ ಸೇರಿ ಅನಿಕಾ, ಅನೂಪ್, ಶೋವಿಕ್ ಮತ್ತು ಮಿರಂಡಾಗೆ ರೆಹಮಾನ್ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಂದು ಹೇಳಲಾಗಿದೆ. ಸದ್ಯ, ರೆಹಮಾನ್​ನನ್ನು ಜುಲೈ 10 ರಂದು ಮುಂಬೈನಲ್ಲಿ NCB ಅಧಿಕಾರಿಗಳು ಬಂಧಿಸಿದ್ದಾರೆ. ಈಗ ಸುಶಾಂತ್ ಕೇಸ್​ಗೂ ಬೆಂಗಳೂರಿಗೂ ಲಿಂಕ್ ಇರುವುದು ರುಜುವಾಗಿದೆ. ಇದೇ ಕಾರಣಕ್ಕೆ ಮುಂಬೈನ NCB ಕಚೇರಿಗೆ ಹಾಜರಾಗಲು ಯಶಸ್​ಗೆ ನೋಟಿಸ್ ನೀಡಲಾಗಿದೆ.

ಸುಶಾಂತ್ ತನಿಖೆಯಲ್ಲಿ ಕಾರ್ಪೋರೇಟರ್ ಕೇಶವ್​ ಮೂರ್ತಿ ಮಗನ ಹೆಸರು ಉಲ್ಲೇಖವಾಗಿದೆ. ಹೀಗಾಗಿ, ಎರಡು ದಿನಗಳ ಹಿಂದೆ ಕಾರ್ಪೋರೇಟರ್ ಕೇಶವ್ ಮೂರ್ತಿ ಮನೆ ಮೇಲೆ 16 ಜನ NCB ಅಧಿಕಾರಿಗಳ ತಂಡವು ದಾಳಿ ನಡೆಸಿ ಇಂದು ಯಶಸ್​ಗೆ ನೋಟಿಸ್ ನೀಡಿದ್ದಾರೆ. ದಾಳಿ ವೇಳೆ ಯಶಸ್ ಮನೆಯಲ್ಲಿ ಇರಲಿಲ್ಲ. ನೋಟಿಸ್​ನಲ್ಲಿ ಸೆಪ್ಟಂಬರ್​  7ರ ಒಳಗೆ ತನಿಖೆಗೆ ಹಾಜರಾಗಲು ಯಶಸ್​ಗೆ ಸೂಚನೆ ನೀಡಲಾಗಿದೆ.

ಇದೀಗ, ಯಶಸ್​ ಜೊತೆ ಪಾರ್ಟಿ ಮಾಡುತ್ತಿದ್ದ ಹಲವು ಕಾರ್ಪೊರೇಟರ್‌ಗಳ ಪುತ್ರರಿಗೆ ನಡುಕ ಶುರುವಾಗಿದೆ. ಜೊತೆಗೆ, ಕಾರ್ಪೊರೇಟರ್‌ಗಳ ಪುತ್ರರಿಗೆ ಈ ಪ್ರಕರಣ ಉರುಳಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Published On - 1:45 pm, Sun, 6 September 20