ವಿಜಯೇಂದ್ರ ವಿರುದ್ಧ ಯತ್ನಾಳ್ ಫೋರ್ಜರಿ ಮತ್ತು ಸುಲಿಗೆಯ ಗಂಭೀರ ಆರೋಪ ಮಾಡಿದ್ದಾರೆ: ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಒಳಜಗಳ ಬಗ್ಗೆ ಮಾತಾಡಿದ ಪ್ರಿಯಾಂಕ್ ಖರ್ಗೆ, ಕೆಲ ಮಂತ್ರಿ ಮತ್ತ್ತು ಶಾಸಕರು ರಂದೀಪ್ ಸುರ್ಜೆವಾಲಾ ಅವರಲ್ಲಿ ದೂರು ಹೇಳಿಕೊಳ್ಳಬಯಸಿದ್ದರು, ಕೆಪಿಸಿಸಿ ಅಧ್ಯಕ್ಷ ಅಥವಾ ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ಗೆ ಬಿಟ್ಟ ವಿಚಾರವಾಗಿದೆ, ಯಾರೂ ಅದರ ಬಗ್ಗೆ ಮಾತಾಡಕೂಡದೆಂದು ಮಲ್ಲಿಕಾರ್ಜುನ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ ಎಂದರು.
ಬೆಂಗಳೂರು: ಬಿಜೆಪಿಯಲ್ಲಿ ನಡೆಯುತ್ತಿರುವ ಅರೋಪಗಳ ಪ್ರವರ ಪಕ್ಷದ ಅಂತರಿಕ ವಿಷಯವಾಗಿದ್ದರೆ ಕಾಂಗ್ರೆಸ್ ಖಂಡಿತವಾಗಿಯೂ ತಲೆ ಹಾಕುತ್ತಿರಲಿಲ್ಲ, ಅದರೆ ಬಿಜೆಪಿ ಶಾಸಕರೊಬ್ಬರು ಪಕ್ಷದ ರಾಜ್ಯಾಧ್ಯಕ್ಷನ ವಿರುದ್ಧ ಕ್ರಿಮಿನನ್ ಸ್ವರೂಪದ ಆರೋಪಗಳನ್ನು ಮಾಡುತ್ತ್ತಿದ್ದಾರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರ ಸಹಿಯನ್ನು ಮಗ ವಿಜಯೇಂದ್ರ ಫೋರ್ಜರಿ ಮಾಡಿದ್ದಾರೆ ಎಂದಿದ್ದಾರೆ, ಇದು ಬಹಳ ಗಂಭೀರವಾದ ಆರೋಪ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. ವಿಜಯೇಂದ್ರ ಒಬ್ಬ ಭ್ರಷ್ಟ, ಸುಲಿಗೆಕೋರ ಮತ್ತು ಯಡಿಯೂರಪ್ಪ ಜೈಲಿಗೆ ಹೋಗಲು ಅವರೇ ಕಾರಣ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡುತ್ತಾರೆ, ಅವರು ದೂರು ನೀಡಿದರೆ ಸರ್ಕಾರ ಖಂಡಿತವಾಗಿಯೂ ತನಿಖೆ ಮಾಡಿಸುತ್ತದೆ ಎಂದು ಖರ್ಗೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್: ಪ್ರಿಯಾಂಕ್ ಖರ್ಗೆ ಆಪ್ತ ಸೇರಿ ಐವರ ಬಂಧನ