ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಕಾಂಗ್ರೆಸ್ ನಾಯಕರೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ: ಕೆಎಸ್ ಈಶ್ವರಪ್ಪ

|

Updated on: Apr 17, 2024 | 11:29 AM

ಯಡಿಯೂರಪ್ಪ ಕಾಂಗ್ರೆಸ್ ನಾಯಕರ ಜೊತೆ ಮಾಡಿಕೊಂಡಿರುವ ಒಳಒಪ್ಪಂದಗಳ ಬಗ್ಗೆ ಮಾತಾಡಲ್ಲ. ವಿಧಾನಸಭಾ ಚುನಾವಣೆಯಲ್ಲಿ ಅವರು ಶಿಕಾರಿಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜೊತೆ ಒಳಒಪ್ಪಂದ ಮಾಡಿಕೊಂಡಾಗ್ಯೂ ಅವರ ಮಗ ವಿಜಯೇಂದ್ರ ಗೆಲ್ಲಲು ತಿಣುಕಾಬೇಕಾಯಿತು ಎಂದು ಅವರು ಹೇಳಿದರು.

ಶಿವಮೊಗ್ಗ: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ (KS Eshwarappa) ಮತ್ತೊಮ್ಮೆ ಬಿಎಸ್ ಯಡಿಯೂರಪ್ಪ (BS Yediyurappa) ಮೇಲೆ ಪ್ರಹಾರ ನಡೆಸಿ, ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿದ್ದಲ್ಲದೆ ಶಿವಮೊಗ್ಗವೂ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೊತೆ ಒಳಒಪ್ಪಂದ (understanding) ಮಾಡಿಕೊಂಡು ರಾಜ್ಯದಲ್ಲಿ ಬಿಜೆಪಿಯನ್ನು ಹೀನ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ಹೇಳಿದರು. ನಿನ್ನೆ ಹೇಳಿಕೆಯೊಂದನ್ನು ನೀಡಿರುವ ಯಡಿಯೂರಪ್ಪನವರು ಜೆಡಿಎಸ್ ಪಕ್ಷದ ಹೆಸರು ಉಲ್ಲೆಖಿಸದೆ ತಮ್ಮ ಮೈತ್ರಿ ಮುಂದಿನ ಚುನಾವಣೆಗಳಿಗೂ ಮುಂದುವರಿಯಲಿದೆ ಎಂದಿದ್ದಾರೆ. ಆದರೆ ಅವರು ಕಾಂಗ್ರೆಸ್ ನಾಯಕರ ಜೊತೆ ಮಾಡಿಕೊಂಡಿರುವ ಒಳಒಪ್ಪಂದಗಳ ಬಗ್ಗೆ ಮಾತಾಡಲ್ಲ. ವಿಧಾನಸಭಾ ಚುನಾವಣೆಯಲ್ಲಿ ಅವರು ಶಿಕಾರಿಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜೊತೆ ಒಳಒಪ್ಪಂದ ಮಾಡಿಕೊಂಡಾಗ್ಯೂ ಅವರ ಮಗ ವಿಜಯೇಂದ್ರ ಗೆಲ್ಲಲು ತಿಣುಕಾಬೇಕಾಯಿತು ಎಂದು ಈಶ್ವರಪ್ಪ ಹೇಳಿದರು.

ಈಗಿನ ಲೋಕಸಭಾ ಚುನಾವಣೆಯಲ್ಲೂ ಅವರು ಕಾಂಗ್ರೆಸ್ ನಾಯಕರ ಜೊತೆ ಒಳಒಪ್ಪಂದ ಮಾಡಿಕೊಂಡಿರುವುದನ್ನು ಕಾಂಗ್ರೆಸ ನಾಯಕರೇ ತನಗೆ ಫೋನ್ ಮಾಡಿ ಹೇಳುತ್ತಿದ್ದಾರೆ ಎಂದ ಈಶ್ವರಪ್ಪ ನಿನ್ನೆ ತಾನು ಜಿಲ್ಲಾ ನ್ಯಾಯಲಯಕ್ಕೆ ಹೋದಾಗ ಅಲ್ಲಿದ್ದ ವಕೀಲರು ತಾನು ಸ್ಪರ್ಧೆ ಮಾಡುತ್ತಿರುವುದನ್ನು ಶ್ಲಾಘಿಸಿ ಬಿವೈ ರಾಘವೇಂದ್ರ ಸೋಲಲೇಬೇಕು ಅಂತ ಹೇಳಿದರು ಅಂತ ಮಾಧ್ಯಮದವರಿಗೆ ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಳ್ಳಾರಿ; 23 ಲೋಕಸಭಾ ಕ್ಷೇತ್ರ ಸುತ್ತಿರುವೆ, ಹೋದೆಡೆಯೆಲ್ಲ ಜನರ ಬಾಯಲ್ಲಿ ಮೋದಿ ಜಪ!: ಬಿಎಸ್ ಯಡಿಯೂರಪ್ಪ