ಬಸವಣ್ಣನಿಗೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಕೆಂಪೇಗೌಡರಿಗೆ ನೀಡಿದ ಮುಖ್ಯಮಂತ್ರಿಯೆಂದರೆ ಯಡಿಯೂರಪ್ಪ: ಶ್ರೀ ನಂಜಾವಧೂತ ಸ್ವಾಮೀಜಿ
ಜಗಜ್ಯೋತಿ ಬಸವಣ್ಣ ಅವರಿಗೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಕೆಂಪೇಗೌಡರಿಗೆ ನೀಡಿದ ರಾಜ್ಯದ ಏಕೈಕ ಮುಖ್ಯಮಂತ್ರಿ ಎಂದರೆ ಬಿ ಎಸ್ ಯಡಿಯೂರಪ್ಪ ಎಂದ ಸ್ವಾಮೀಜಿಯವರು ನಂತರ ಬಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅನ್ನುವ ಬದಲು ಶ್ರೀಗಳು ಶಿವಕುಮಾರ ಅಂದುಬಿಟ್ಟರು!
ಬೆಂಗಳೂರು: ಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ (Nanjavadhootha Swamiji) ಅವರು ಸೋಮವಾರ ಬೆಂಗಳೂರಲ್ಲಿ ನಾಡಪ್ರಭು ಕೆಂಪೇಗೌಡರ (Nadaprabhu Kempegowda) 513 ಜಯಂತಿ ಆಚರಣೆ ಸಂದರ್ಭ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತಾಡುವ ನಮ್ಮ ಮೆಟ್ರೋ ರೈಲು (Namma Metro) ಸೇವೆಯನ್ನು ನಮ್ಮ ಕೆಂಪೇಗೌಡ ಮೆಟ್ರೋ ಅಂತ ಮರುನಾಮಕರಣ ಮಾಡಲು ಸರ್ಕಾರಕ್ಕೆ ಸಲಹೆ ನೀಡಿದರು. ಮೆಜೆಸ್ಟಿಕ್ ಬಸ್ ನಿಲ್ದಾಣದ ಹೆಸರನ್ನು ಕೆಂಪೇಗೌಡ ಬಸ್ ನಿಲ್ದಾಣ ಅಂತ ಬದಲಾಯಿಸಿದರೂ ಜನ ಈಗಲೂ ಅದನ್ನು ಮೆಜೆಸ್ಟಿಕ್ ಅಂತಲೇ ಕರೆಯುತ್ತಾರೆ ಎಂದು ಖೇದ ವ್ಯಕ್ತಪಡಿಸಿದರು.
ಜಗಜ್ಯೋತಿ ಬಸವಣ್ಣ ಅವರಿಗೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಕೆಂಪೇಗೌಡರಿಗೆ ನೀಡಿದ ರಾಜ್ಯದ ಏಕೈಕ ಮುಖ್ಯಮಂತ್ರಿ ಎಂದರೆ ಬಿ ಎಸ್ ಯಡಿಯೂರಪ್ಪ ಎಂದ ಸ್ವಾಮೀಜಿಯವರು ನಂತರ ಬಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅನ್ನುವ ಬದಲು ಶ್ರೀಗಳು ಶಿವಕುಮಾರ ಅಂದುಬಿಟ್ಟರು! ಕೆಂಪೇಗೌಡರ ಹೆಸರಲ್ಲಿ ಒಂದು ಮ್ಯೂಸಿಯಂ ಇಲ್ಲವೇ ದೊಡ್ಡ ಗ್ರಂಥಾಲಯ ಅರಂಭಿಸಬೇಕೆನ್ನುವ ಸಲಹೆಯನ್ನೂ ಸ್ವಾಮೀಜಿ ನೀಡಿದರು.
ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರು ಯಾರ ಒಬ್ಬರ ಸ್ವತ್ತಲ್ಲ, ಇಡೀ ಜನಾಂಗದ ಸ್ವತ್ತು: ಮಾಜಿ ಸಿಎಂ ಎಸ್.ಎಂ. ಕೃಷ್ಣ ಹೇಳಿಕೆ