ಯೆಮೆನ್ನಲ್ಲಿ ಇಸ್ರೇಲ್ನಿಂದ ಮತ್ತೆ ವೈಮಾನಿಕ ದಾಳಿ, 35 ಮಂದಿ ಸಾವು, 130ಕ್ಕೂ ಅಧಿಕ ಜನರಿಗೆ ಗಾಯ
ಯೆಮೆನ್ನಲ್ಲಿ ಇಸ್ರೇಲ್ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದೆ. ಕನಿಷ್ಠ 35 ಮಂದಿ ಸಾವನ್ನಪ್ಪಿದ್ದು, 130ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.ಬಂಡುಕೋರರು ಇಸ್ರೇಲಿ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ನಡೆಸಿದ ಕೆಲವೇ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.ಗಾಜಾ ನಗರದಲ್ಲಿ ಸುಮಾರು 1 ಮಿಲಿಯನ್ ಜನರು ಸ್ಥಳಾಂತರಗೊಳ್ಳಬೇಕೆಂದು ಇಸ್ರೇಲ್ ತನ್ನ ಕರೆಯನ್ನು ಪುನರುಚ್ಚರಿಸಿತು.
ಯೆಮನ್, ಸೆಪ್ಟೆಂಬರ್ 11: ಯೆಮೆನ್ನಲ್ಲಿ ಇಸ್ರೇಲ್ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದೆ. ಕನಿಷ್ಠ 35 ಮಂದಿ ಸಾವನ್ನಪ್ಪಿದ್ದು, 130ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.ಬಂಡುಕೋರರು ಇಸ್ರೇಲಿ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ನಡೆಸಿದ ಕೆಲವೇ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.ಗಾಜಾ ನಗರದಲ್ಲಿ ಸುಮಾರು 1 ಮಿಲಿಯನ್ ಜನರು ಸ್ಥಳಾಂತರಗೊಳ್ಳಬೇಕೆಂದು ಇಸ್ರೇಲ್ ತನ್ನ ಕರೆಯನ್ನು ಪುನರುಚ್ಚರಿಸಿತು.
ರಾಜಧಾನಿ ಸನಾ ಸೇರಿದಂತೆ ಯೆಮೆನ್‌ನ ಹಲವಾರು ಭಾಗಗಳಲ್ಲಿ ಇಸ್ರೇಲ್ ಬುಧವಾರ ಹೌತಿ ಬಂಡುಕೋರರ ಮೇಲೆ ವಾಯುದಾಳಿ ನಡೆಸಿದೆ. ಕತಾರ್‌ನಲ್ಲಿ ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ನಂತರ ಇಸ್ರೇಲ್ ಈ ದಾಳಿ ನಡೆಸಿದೆ. ಯೆಮೆನ್ ಸರ್ಕಾರಿ ಅಧಿಕಾರಿಗಳ ಪ್ರಕಾರ, ದಾಳಿಯಲ್ಲಿ ಮಿಲಿಟರಿ ನೆಲೆಗಳು ಮತ್ತು ಇಂಧನ ಕೇಂದ್ರವನ್ನು ಗುರಿಯಾಗಿಸಲಾಗಿದೆ. ಇಸ್ರೇಲ್ ಯುದ್ಧ ವಿಮಾನಗಳ ಮೂಲಕ ಈ ದಾಳಿಯನ್ನು ನಡೆಸಿದೆ ಎಂದು ನಂಬಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 11, 2025 09:01 AM