ಕೊಪ್ಪಳದ ಕನಕಗಿರಿಗೆ ಭೇಟಿ ನೀಡಿ ಚಿದಾನಂದ ಅವಧೂತರ ದರ್ಶನ ಪಡೆದ ಬಾಬಾ ರಾಮದೇವ್
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿದ್ದ ಪರ್ವತ ಅಂಬಾ ಮಠಕ್ಕೂ ರಾಮದೇವ್ ಭೇಟಿ ನೀಡಿದ್ದರು. ಬಳ್ಳಾರಿಯ ಖಾಸಗಿ ಕಾರ್ಯಕ್ರಮದಲ್ಲಿ ರಾಮದೇವ್ ಭಾಗಿಯಾಗಿದ್ದಾರೆ.
ಕೊಪ್ಪಳ: ಜಿಲ್ಲೆಯ ಕನಕಗಿರಿಗೆ ಬಾಬಾ ರಾಮದೇವ್ (Baba Ramdev) ಭೇಟಿ ನೀಡಿ ಚಿದಾನಂದ ಅವಧೂತರ ದರ್ಶನ ಪಡೆದಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿದ್ದ ಪರ್ವತ ಅಂಬಾ ಮಠಕ್ಕೂ ರಾಮದೇವ್ ಭೇಟಿ ನೀಡಿದ್ದರು. ಬಳ್ಳಾರಿಯ ಖಾಸಗಿ ಕಾರ್ಯಕ್ರಮದಲ್ಲಿ ರಾಮದೇವ್ ಭಾಗಿಯಾಗಿದ್ದಾರೆ. ನಿನ್ನೆ ರಾತ್ರಿ ಯೋಗ ಗುರು ಬಾಬಾ ರಾಮದೇವ್ ಅಂಬಾ ಮಠ, ಚಿದಾನಂದ ಅವಧೂತರ ದರ್ಶನವನ್ನು ಪಡೆದಿದ್ದಾರೆ. ನಿನ್ನೆ ಇಡೀ ವಿಶ್ವವೇ ಇಂಡೋ- ಪಾಕ್ ನಡುವಿನ ಕ್ರಿಕೆಟ್ ಮ್ಯಾಚ್ ನೋಡಲು ಕಾತೂರದಿಂದ ಕಾಯುತ್ತಿತ್ತು. ಮ್ಯಾಚ್ ಬಗ್ಗೆ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಯೋಗ ಗುರು ರಾಮದೇವ್ ಭಾರತ ಮತ್ತು ಪಾಕ್ ನಡುವಿನ ಪಂದ್ಯ ರಾಷ್ಟ್ರ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.