ಪೊಲೀಸರು ಬಂದಾಗ ಸೌಂದರ್ಯ ಜಗದೀಶ್ ಮನೆಯಲ್ಲಿ ಹೈಡ್ರಾಮಾ; ಕೆಲ ಹೊತ್ತು ಬಾಗಿಲು ತೆರೆಯದ ಕುಟುಂಬಸ್ಥರು
ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದಾಗ ಮನೆ ಬಾಗಿಲು ತೆಗೆಯದೆ ಹೈಡ್ರಾಮಾ ಮಾಡಲಾಗಿದೆ. ಹಲ್ಲೆಯಲ್ಲಿ ಜಗದೀಶ್ ಮನೆ ಕೆಲಸದ ಭುವನಾ ಭಾಗಿಯಾಗಿದ್ದು, ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಅವರ ಪುಂಡಾಟ ಪ್ರಕರಣ ಹಲವು ರೂಪ ಪಡೆದುಕೊಳ್ಳುತ್ತಿದೆ. ಈ ಕೇಸ್ ಕುರಿತು ವಿಚಾರಣೆ ನಡೆಸಲು ಸೌಂದರ್ಯ ಜಗದೀಶ್ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದ್ದರು. ಈ ವೇಳೆ ಬಾಗಿಲು ತೆರೆಯಲು ಕುಟುಂಬಸ್ಥರು ಕೆಲ ಕಾಲ ನಕಾರ ವ್ಯಕ್ತಪಡಿಸಿದರು. ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದಾಗ ಮನೆ ಬಾಗಿಲು ತೆಗೆಯದೆ ಹೈಡ್ರಾಮಾ ಮಾಡಲಾಗಿದೆ. ಕೆಲಹೊತ್ತಿನ ಬಳಿಕ ಬಾಗಿಲು ತೆಗೆಯಲಾಯಿತು. ಹಲ್ಲೆಯಲ್ಲಿ ಜಗದೀಶ್ ಮನೆ ಕೆಲಸದ ಭುವನಾ ಭಾಗಿಯಾಗಿದ್ದರು. ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ ಆರೋಪವನ್ನು ಸ್ನೇಹಿತ್ ಎದುರಿಸುತ್ತಿದ್ದಾರೆ. ಶನಿವಾರ (ಅ.23) 10 ಜನ ಬೌನ್ಸರ್ಸ್ ಜೊತೆ ಬಂದು ಸ್ನೇಹಿತ್ ಪುಂಡಾಟ ನಡೆಸಿದ್ದರು. ಅದರ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ. ಈ ಕೇಸ್ನಲ್ಲಿ ರಾಜಿ ಮಾಡಿಸಲು ಸ್ಯಾಂಡಲ್ವುಡ್ನ ಸ್ಟಾರ್ ನಟ ಹಾಗೂ ನಿರ್ಮಾಪಕರು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿ ಕೂಡ ಹೇಳಿಬಂದಿದೆ.
ಇದನ್ನೂ ಓದಿ:
ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಪುಂಡಾಟ ಕೇಸ್ನಲ್ಲಿ ರಾಜಿಗೆ ಪ್ರಯತ್ನಿಸಿದ ಸ್ಟಾರ್ ನಟ?
Snehith: ಹಲ್ಲೆ ಆರೋಪ; ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲು

ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ

ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ

ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್

ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
