Gaalipata 2: ಜೋರಾಗಿ ಹಾರುತ್ತಿದೆ ಗಾಳಿಪಟ; ನಟ, ನಿರ್ದೇಶಕ, ನಿರ್ಮಾಪಕರ ಮೊಗದಲ್ಲಿ ಮೂಡಿತು ನಗು
Golden Star Ganesh: ‘ಗಾಳಿಪಟ 2’ ಚಿತ್ರಕ್ಕೆ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಆಗುತ್ತಿದೆ. ಇದರಿಂದ ಇಡೀ ಚಿತ್ರತಂಡದವರ ಮೊಗದಲ್ಲೂ ನಗು ಮೂಡಿದೆ.
ಆಗಸ್ಟ್ 12ರಂದು ಬಿಡುಗಡೆ ಆಗಿರುವ ‘ಗಾಳಿಪಟ 2’ (Gaalipata 2) ಸಿನಿಮಾ ಯಶಸ್ಸು ಕಂಡಿದೆ. ಇದರಿಂದ ‘ಗೋಲ್ಡನ್ ಸ್ಟಾರ್’ ಗಣೇಶ್ (Golden Star Ganesh) ಅವರ ವೃತ್ತಿಜೀವನದಲ್ಲಿ ಮತ್ತೊಂದು ಗೆಲುವು ಸಿಕ್ಕಂತಾಗಿದೆ. ಅವರ ಮತ್ತು ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಕಾಂಬಿನೇಷನ್ಗೆ ಜಯ ಸಿಕ್ಕಿದೆ. ಪ್ರೇಕ್ಷಕರು ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಆಗುತ್ತಿರುವುದಕ್ಕೆ ನಿರ್ಮಾಪಕ ರಮೇಶ್ ರೆಡ್ಡಿ ಅವರ ಮೊಗದಲ್ಲೂ ನಗು ಮೂಡಿದೆ. ಚಿತ್ರದ ಗೆಲುವಿನ ಖುಷಿಯಲ್ಲಿ ಈ ಮೂವರು ‘ಟಿವಿ9 ಕನ್ನಡ’ ಜೊತೆ ಮಾತನಾಡಿದ್ದಾರೆ. ಯಶಸ್ಸಿನ ಸಂಭ್ರಮದಲ್ಲಿ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ.
Published on: Aug 14, 2022 05:57 PM