Gaalipata 2: ಕೊನೇ ಕ್ಷಣದಲ್ಲಿ ಬದಲಾಯ್ತು ಭಟ್ಟರ ಸಾಹಿತ್ಯ; ‘ದೇವ್ಲೇ ದೇವ್ಲೇ..’ ಸಾಂಗ್ ಬಗ್ಗೆ ಇಲ್ಲಿದೆ ಮಸ್ತ್ ಮಾಹಿತಿ
Devle Devle Song: ‘ಗಾಳಿಪಟ’ ರೀತಿಯೇ ‘ಗಾಳಿಪಟ 2’ ಚಿತ್ರ ಕೂಡ ಹಾಡುಗಳ ಮೂಲಕ ಗಮನ ಸೆಳೆಯುತ್ತಿದೆ. ಆಗಸ್ಟ್ 12ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಬಹುನಿರೀಕ್ಷಿತ ‘ಗಾಳಿಪಟ 2’ (Gaalipata 2) ಸಿನಿಮಾದ ಹಾಡುಗಳು ಸದ್ದು ಮಾಡುತ್ತಿವೆ. ಯೋಗರಾಜ್ ಭಟ್ (Yogaraj Bhat) ಬರೆದ ‘ದೇವ್ಲೇ ದೇವ್ಲೇ..’ ಹಾಡು ಬಿಡುಗಡೆಯಾಗಿ ಮೆಚ್ಚುಗೆ ಗಳಿಸುತ್ತಿದೆ. ಈ ಹಾಡಿನಲ್ಲಿ ‘ದೇವ್ರೇ ದೇವ್ರೇ..’ ಅಂತ ಬರೆಯುವ ಬದಲು ‘ದೇವ್ಲೇ ದೇವ್ಲೇ..’ (Devle Devle song) ಅಂತ ಬರೆದಿರುವುದು ಯಾಕೆ? ಈ ಬಗ್ಗೆ ಸ್ವತಃ ಯೋಗರಾಜ್ ಭಟ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಎಂ. ರಮೇಶ್ ರೆಡ್ಡಿ ನಿರ್ಮಾಣದ ಈ ಚಿತ್ರದಲ್ಲಿ ‘ಗೋಲ್ಡನ್ ಸ್ಟಾರ್’ ಗಣೇಶ್, ಪವನ್ ಕುಮಾರ್, ದಿಗಂತ್, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ.
Published on: Jul 15, 2022 09:32 AM