ಬಿಗ್ಬಾಸ್ ಮನೆಗೆ ಕಾಲಿಟ್ಟ ಯೋಗರಾಜ್ ಭಟ್, ಮನೆಯಲ್ಲಿ ನಗುವೋ ನಗು
Bigg Boss Kannada: ಬರೀ ಜಗಳವೇ ತುಂಬಿದ್ದ ಬಿಗ್ಬಾಸ್ ಮನೆಯಲ್ಲಿ ಈಗ ಆಗೊಮ್ಮೆ-ಈಗೊಮ್ಮೆ ನಗು ಕಾಣಿಸುತ್ತಿದೆ. ಇದೀಗ ಬಿಗ್ಬಾಸ್ ಮನೆಗೆ ನಿರ್ದೇಶಕ ಯೋಗರಾಜ್ ಭಟ್ ಎಂಟ್ರಿ ನೀಡಿದ್ದು, ತಮ್ಮ ಮಾತುಗಳಿಂದ ಮನೆಗೆ ನಗು ತಂದಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ...
ಬಿಗ್ಬಾಸ್ ಕನ್ನಡ ಸೀಸನ್ 11 ಆರಂಭದ ಒಂದೆರಡು ವಾರ ಬರೀ ಜಗಳಗಳೇ ನಡೆದಿದ್ದವು. ಜಗಳ-ಬೈದಾಟ, ಹೊಡೆದಾಟಗಳನ್ನು ನೋಡಿ ಪ್ರೇಕ್ಷಕರು ಸುಸ್ತಾಗಿದ್ದರು. ಜಗದೀಶ್ ಹಾಗೂ ರಂಜಿತ್ ಅನ್ನು ಹೊರಗೆ ಹಾಕಿದ ಬಿಗ್ಬಾಸ್ ಈಗ ಹನುಮಂತನನ್ನು ವೈಲ್ಡ್ ಕಾರ್ಡ್ ಮೂಲಕ ಒಳಗೆ ಕಳಿಸಿದ್ದಾರೆ. ಹನುಮಂತ ಒಳಗೆ ಹೋದ ಬಳಿಕ ಮನೆಯ ವಾತಾವರಣ ತುಸು ಲೈಟ್ ಆಗಿದೆ. ಆಗೊಮ್ಮೆ-ಈಗೊಮ್ಮೆ ನಗು, ಹಾಸ್ಯ, ಹಾಡು ಕೇಳುತ್ತಿದೆ. ಇದೀಗ ಬಿಗ್ಬಾಸ್ ಮನೆಗೆ ವಿಕಟ ಕವಿ ಎಂದೇ ಹೆಸರಾಗಿರುವ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಹೋಗಿದ್ದಾರೆ. ಭಟ್ಟರು ತಮ್ಮ ಎಂದಿನ ಶೈಲಿಯಲ್ಲಿ ತಮ್ಮ ಒನ್ ಲೈನರ್ಗಳಿಂದ, ದೇಶಾವರಿ ಮಾತುಗಳಿಂದ ಮನೆಯ ಸದಸ್ಯರನ್ನು ನಗಿಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 26, 2024 08:58 AM