ಮಂಡ್ಯದ ಜನ ದಡ್ಡರು, ಬಳೆತೊಟ್ಟವರು ಎಂದ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ
ಕುಮಾರಸ್ವಾಮಿ ಉದ್ದೇಶಪೂರ್ವಕವಾಗಿ ಸಿಪಿ ಯೋಗೇಶ್ವರ್ಗೆ ಚನ್ನಪಟ್ಟಣ ಉಪ ಚುನಾವಣೆಗೆ ಟಿಕೆಟ್ ತಪ್ಪಿಸಿದರು ಎಂದು ಹೇಳಿದ ಶಿವರಾಮೇಗೌಡ, ಸಿಪಿವೈಗೆ ಜೆಡಿಎಸ್ ಟಿಕೆಟ್ ಆಫರ್ ಮಾಡುವ ಬದಲು ಅವರನ್ನು ಬಿಜೆಪಿಯಿಂದಲೇ ಸ್ಪರ್ಧಿಸಲು ಹೇಳಿ ಡಾ ಸಿಎನ್ ಮಂಜುನಾಥ್ ಅವರನ್ನು ಗೆಲ್ಲಿಸಿದಂತೆ ಗೆಲ್ಲಿಸಬೇಕಿತ್ತು ಅಂತ ಹೇಳಿದರು.
ಮಂಡ್ಯ: ಮಾಜಿ ಸಂಸದ ಎಲ್ ಅರ್ ಶಿವರಾಮೇಗೌಡಗೆ ಬಾಯಿ ಭದ್ರವಿಲ್ಲ. ಇವತ್ತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು ಮಂಡ್ಯ ಜಿಲ್ಲೆಯ ಜನ ದಡ್ಡರು, ಬಳೆತೊಟ್ಟವರು ಎಂದು ಹೀಯಾಳಿಸಿದರು. ಶಿವರಾಮೇಗೌಡನಿಗೆ ಹೆಚ್ ಡಿ ಕುಮಾರಸ್ವಾಮಿ ಮೇಲೆ ದ್ವೇಷವಿದೆ ಅದರೆ ಅದನ್ನು ಬಾಯಿಚಪಲದ ಮೂಲಕ ತೀರಿಸಿಜೊಳ್ಳುವ ಭರದಲ್ಲಿ ಅವರು ಮಂಡ್ಯದ ಜನರ ಬಗ್ಗೆ ಕೇವಲವಾಗಿ ಮಾತಾಡಿದ್ದು ಸರಿಕಾಣಲಿಲ್ಲ. ಅವರ ಆಕ್ಷೇಪಣೆಯೆಂದರೆ, ಕುಮಾರಸ್ವಾಮಿ ಬೇರೆ ಜಿಲ್ಲೆಯವರು, ಮಂಡ್ಯದಿಂದ ಯಾಕೆ ಸ್ಪರ್ಧಿಸಬೇಕು ಅನ್ನೋದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ ನಾಯಕ ಎಲ್ಆರ್ ಶಿವರಾಮೇಗೌಡಗೆ ಬಂಧನ ಭೀತಿ: ಜಾಮೀನಿಗಾಗಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಎಂಪಿ
Published on: Oct 26, 2024 10:30 AM
Latest Videos