ನೀನೇ ನನ್ನ ಆಹಾರವೆಂದು ಕಪ್ಪೆಯನ್ನ ಭರ್ಜರಿಯಾಗಿ ಬೇಟೆಯಾಡಿದ ಬಿಲ್ ಮುರಿ ಹಾವು
ನೀನೇ ನನ್ನ ಆಹಾರವೆಂದು ಹರಸಾಹಸಪಟ್ಟು ಹಾವೊಂದು ಕಪ್ಪೆಯನ್ನ ಬೇಟೆಯಾಡಿರುವ ವಿಡಿಯೋ ವೈರಲ್ ಆಗಿದೆ.
ಚಿ್ಕ್ಕಮಗಳೂರು: ನೀನೇ ನನ್ನ ಆಹಾರವೆಂದು ಹರಸಾಹಸಪಟ್ಟು ಹಾವೊಂದು ಕಪ್ಪೆಯನ್ನ ಬೇಟೆಯಾಡಿರುವ ವಿಡಿಯೋ ವೈರಲ್ ಆಗಿದೆ. ಶೃಂಗೇರಿ ತಾಲೂಕಿನ ಮೆಣಸೆ ಸಮೀಪದ ಕೆರೆಮನೆಯಲ್ಲಿ ಈ ಘಟನೆ ನಡೆದಿದ್ದು, ಪ್ರಗತಿಪರ ರೈತ ಭರತ್ರಾಜ್ ಎನ್ನುವವರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಕಪ್ಪೆಯನ್ನ ಮರದ ಬಳ್ಳಿಯೊಮದರಲ್ಲಿ ಸುತ್ತಿಕೊಂಡು ಹಾವು ಭರ್ಜರಿಯಾಗಿ ಬೇಟೆಯಾಡಿದೆ. ಹೀಗೆ ಭೇಟೆಯಾಡಿದ ಹಾವವನ್ನು ಬಿಲ್ ಮುರಿ ಹಾವು (Common Bronze Back Tree Snake) ಎಂದು ಗುರುತಿಸಲಾಗಿದೆ. ಸಣ್ಣ ಪಕ್ಷಿಗಳು, ಕಪ್ಪೆಗಳನ್ನ ತಿಂದು ಬದುಕುವ ಅಪರೂಪದ ಹಾವು ಇದಾಗಿದ್ದು, ಕಪ್ಪೆ ತಿಂದು ಅರಗಿಸಿಕೊಳ್ಳಲು ಬಿಲ್ ಮುರಿ ಹಾವು ಹರಸಾಹಸಪಟ್ಟಿದೆ.
ಈ ಕುರಿತು ಮಾತನಾಡಿರುವ ಪ್ರಗತಿಪರ ರೈತ ಭರತ್ರಾಜ್, ಇದು ಬಹಳ ಅಪರೂಪ ಹಾವು. ಮಲ್ನಾಡ್ ಕಡೆ ಈ ಹಾವನ್ನ ಬಿಲ್ ಮುರಿ ಹಾವು ಎಂದು ಕರೆಯುತ್ತಾರೆ. ಇದು ಹೆಚ್ಚಾಗಿ ಯಾರ ಕಣ್ಣಿಗೂ ಸಹ ಕಾಣಿಸಿಕೊಳ್ಳುವುದಿಲ್ಲ. ಮರಗಳಲ್ಲಿ ವಾಸ ಮಾಡುವುದರ ಜೊತೆಗೆ ಸಣ್ಣ ಪಕ್ಷಿಗಳು, ಕಪ್ಪೆಗಳನ್ನ ತಿಂದು ಬದುಕುತ್ತದೆ ಮತ್ತು ಇದು ವಿಷಕಾರಿ ಹಾವು ಅಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ;
ಫ್ಲೈ ಓವರ್ ಮೇಲೆ ಬೈಕ್ ವಿಲ್ಹಿಂಗ್ ಮಾಡುತ್ತಿದ್ದ ಪುಂಡರನ್ನು ಬಂಧಿಸಿದ ಬೆಂಗಳೂರು ಪೊಲೀಸ್