ಕೊರಾಪುತ್​ನಲ್ಲಿ ಬಿಎಸ್​ಎಫ್ ಶ್ವಾನದಳದ ವಿವಿಧ ತಳಿ ನಾಯಿಗಳ ಕಾರ್ಯಕ್ಷಮತೆ ಕಂಡು ವಿದ್ಯಾರ್ಥಿಗಳು ಮೂಕವಿಸ್ಮಿತರಾದರು

ಕೊರಾಪುತ್​ನಲ್ಲಿ ಬಿಎಸ್​ಎಫ್ ಶ್ವಾನದಳದ ವಿವಿಧ ತಳಿ ನಾಯಿಗಳ ಕಾರ್ಯಕ್ಷಮತೆ ಕಂಡು ವಿದ್ಯಾರ್ಥಿಗಳು ಮೂಕವಿಸ್ಮಿತರಾದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 05, 2022 | 5:17 PM

ನಾಯಿಗಳಲ್ಲಿರುವ ಜಾಗರೂಕತೆ, ಬುದ್ಧಿಮತ್ತೆ, ಆಜ್ಞೆಗಳನ್ನು ಪಾಲಿಸುವ ವಿಧೆಯತೆ, ವಾಸನೆ ಘ್ರಾಣಿಸುವ ಸಾಮರ್ಥ್ಯ, ಸ್ಫೋಟಕ ಹಾಗೂ ಮಾದಕ ವಸ್ತುಗಳನ್ನು ಪತ್ತೆ ಹಚ್ಚುವ ಕ್ಷಮತೆ, ಜಿಗಿತ ಮತ್ತು ಗಾರ್ಡ್​ಗಳ ಜೊತೆ ಸೇರಿ ಅಕ್ರಮಣ ನಡೆಸುವ ಪರಿ ಕಂಡು ವಿದ್ಯಾರ್ಥಿಗಳು ದಂಗಾದರು.

ಮಕ್ಕಳಲ್ಲಿ ಸಶಸ್ತ್ರ ಸೇನಾ ಪಡೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆಜಾದಿ ಕಾ ಆಮೃತ್ ಮಹೋತ್ಸವ್ ಅಭಿಯಾನದ ಅಂಗವಾಗಿ ಗಡಿ ಭದ್ರತಾ ದಳದ (Border Security Force) ಸೈನಿಕರು ಗುರುವಾರದಂದು ಕೊರಾಪುತ್​​​ನಲ್ಲಿ ರುವ (Koraput) ಸೆಂಟ್ ಜೇವಿಯರ್ ಪ್ರೌಢಶಾಲೆಯಲ್ಲಿ (St Xavier High School) ಒಂದು ಡಾಗ್ ಶೋ (Dog Show) ಏರ್ಪಡಿಸಿದ್ದರು. ಬಿ ಎಸ್ ಎಫ್ ಶ್ವಾನ ದಳಕ್ಕೆ ಸೇರಿದ ಬೆಲ್ಜಿಯನ್ ಶೆಪ್ಹರ್ಡ್, ಜರ್ಮನ್ ಶೆಪ್ಹರ್ಡ್, ಲ್ಯಾಬ್ರಡಾರ್ ರಿಟ್ರೀವರ್ ಮೊದಲಾದ ತಳಿಯ ನಾಯಿಗಳನ್ನು ಕೊರಾಪುಟ್ ಬಿಎಸ್ ಎಫ್ ಕ್ಯಾಂಪ್ನಿಂದ ಶಾಲಾ ಆವರಣಕ್ಕೆ ತರಲಾಗಿತ್ತು. ಅವುಗಳ ಕೌಶಲ್ಯ ಪ್ರದರ್ಶಿಸಲು ಟ್ರೇನರ್ ಗಳು ಸಹ ಆಗಮಿಸಿದ್ದರು. ಬಿಎಸ್ ಎಫ್ ಜವಾನರ ಸಂಕಲ್ಪ ಮತ್ತು ಬದ್ಧತೆ ಹಾಗೂ ನಾಗರಿಕರ ಪ್ರಾಣ ಉಳಿಸಲು ಹೋರಾಡುವ ಜವಾನರಿಗೆ ಈ ನಾಯಿಗಳು ಹೇಗೆ ನೆರವಾಗುತ್ತವೆ ಅಂತ ತೋರಿಸುವುದೇ ಈ ಡಾಗ್ ಶೋ ಆಯೋಜನೆ ಹಿಂದಿನ ಉದ್ದೇಶವಾಗಿತ್ತು ಎಂದು ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಕಮಾಂಡೆಂಟ್ ಸಜ್ಜನ್ ಸಿಂಗ್ ಪನ್ವರ್ ತಿಳಿಸಿದರು.

ಬೆಲ್ಜಿಯನ್ ಶೆಪ್ಹರ್ಡ್, ಜರ್ಮನ್ ಶೆಪ್ಹರ್ಡ್, ಲ್ಯಾಬ್ರಡಾರ್ ರಿಟ್ರೀವರ್ ನಾಯಿಗಳು ವಿದ್ಯಾರ್ಥಿಗಳು ಮೂಕವಿಸ್ಮಿತರನ್ನಾಗಿ ಮಾಡುವ ಕೌಶಲ್ಯಗಳನ್ನು ಪ್ರದರ್ಶಿಸಿದವು. ಅವುಗಳಲ್ಲಿರುವ ಜಾಗರೂಕತೆ, ಬುದ್ಧಿಮತ್ತೆ, ಆಜ್ಞೆಗಳನ್ನು ಪಾಲಿಸುವ ವಿಧೆಯತೆ, ವಾಸನೆ ಘ್ರಾಣಿಸುವ ಸಾಮರ್ಥ್ಯ, ಸ್ಫೋಟಕ ಹಾಗೂ ಮಾದಕ ವಸ್ತುಗಳನ್ನು ಪತ್ತೆ ಹಚ್ಚುವ ಕ್ಷಮತೆ, ಜಿಗಿತ ಮತ್ತು ಗಾರ್ಡ್​ಗಳ ಜೊತೆ ಸೇರಿ ಅಕ್ರಮಣ ನಡೆಸುವ ಪರಿ ಕಂಡು ವಿದ್ಯಾರ್ಥಿಗಳು ದಂಗಾದರು.

ಎಲ್ಲ ನಾಯಿಗಳ ಕೌಶಲ್ಯಗಳನ್ನು ಮನಸಾರೆ ಮೆಚ್ಚಿದ ಮಕ್ಕಳು ಎದ್ದು ನಿಂತು ಚಪ್ಪಾಳೆ ತಟ್ಟಿ ಅವುಗಳ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ವಿವಿದೋದ್ದೇಶಗಳಿಗೆ ಬಳಸಲಾಗುವ ನಾಯಿಗಳು ಬಿ ಎಸ್ ಎಫ್ ಜವಾನರ ವಿಶೇಷ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತವೆ.

ಮಧ್ಯಪ್ರದೇಶದಲ್ಲಿರುವ ನಾಯಿಗಳ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಈ ಶ್ವಾನಗಳಿಗೆ ತರಬೇತಿ ನೀಡಲಾಗುತ್ತದೆ.

ಇದನ್ನೂ ಓದಿ:  Viral Video: ಕಾಡಾನೆಯನ್ನು ಕಾರಿನಲ್ಲಿ ಅಡ್ಡಗಟ್ಟಿ, ಓಡಿಸಿಕೊಂಡು ಹೋದ ಟಿಕ್​ಟಾಕರ್; ವಿಡಿಯೋ ನೋಡಿ ಸಿಟ್ಟಿಗೆದ್ದ ನೆಟ್ಟಿಗರು