ಪ್ರಧಾನಿ ಮೋದಿ ವೈದಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ; ಇದು ಅವರ ವ್ರತನಿಷ್ಠೆ ತೋರಿಸುತ್ತದೆ: ಚಿನ್ನ ಜೀಯರ್ ಸ್ವಾಮಿ
ನವರಾತ್ರಿ ಅಂಗವಾಗಿ ಉಪವಾಸ ವ್ರತಾಚರಣೆಯಲ್ಲಿದ್ದರು. ವೈದಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದಾರೆ. ಇದು ಪ್ರಧಾನಿ ಮೋದಿಯವರ ವ್ರತನಿಷ್ಠೆ ತೋರಿಸುತ್ತದೆ ಎಂದು ಚಿನ್ನ ಜೀಯರ್ ಸ್ವಾಮಿ ಹೇಳಿದ್ದಾರೆ.
ಹೈದರಾಬಾದ್: ಶ್ರೀ ರಾಮಾನುಜಾಚಾರ್ಯರ 216 ಅಡಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಲೋಕಾರ್ಪಣೆ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮೋದಿ ಭಾಗಿ ಆಗಿದ್ದಾರೆ. ‘ಮೈ ಹೋಮ್ ಗ್ರೂಪ್’ ಚೇರ್ಮನ್ ಡಾ.ರಾಮೇಶ್ವರ್ ರಾವ್, ಕೇಂದ್ರ ಸಚಿವ ಕಿಷನ್ ರೆಡ್ಡಿ, ತೆಲಂಗಾಣ ರಾಜ್ಯಪಾಲರು ಭಾಗಿ ಆಗಿದ್ದಾರೆ. ತ್ರಿದಂಡಿ ಶ್ರೀ ಚಿನ್ನಜೀಯರ್ ಸ್ವಾಮೀಜಿಯಿಂದ ಸ್ವಾಗತ ಭಾಷಣ ಮಾಡಿದ್ದಾರೆ. ಪ್ರಧಾನಿ ಮೋದಿ ಅಮೆರಿಕಕ್ಕೆ ಹೋದಾಗ ಉಪವಾಸದಲ್ಲಿದ್ದರು. ನವರಾತ್ರಿ ಅಂಗವಾಗಿ ಉಪವಾಸ ವ್ರತಾಚರಣೆಯಲ್ಲಿದ್ದರು. ವೈದಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದಾರೆ. ಇದು ಪ್ರಧಾನಿ ಮೋದಿಯವರ ವ್ರತನಿಷ್ಠೆ ತೋರಿಸುತ್ತದೆ ಎಂದು ಚಿನ್ನ ಜೀಯರ್ ಸ್ವಾಮಿ ಹೇಳಿದ್ದಾರೆ.
ಡಾ.ಜೆ. ರಾಮೇಶ್ವರ್ ರಾವ್ ಅವರು ಕೇವಲ ಉದ್ಯಮಿ ಅಲ್ಲ. ಡಾ.ರಾಮೇಶ್ವರ್ ರಾವ್ ಧರ್ಮಪಾಲನೆ ಮಾಡುವ ಸದ್ಗುಣಿ. ಈ ಕಾರ್ಯಕ್ರಮದ ಮೂಲ ಶಕ್ತಿ ಡಾ. ರಾಮೇಶ್ವರ್ ರಾವ್. ಧರ್ಮಪಾಲನೆ ಜತೆ ವೈದಿಕ ಪ್ರೇಮಿಯಾಗಿರುವ ಡಾ.ರಾವ್ ಸತ್ಯ ಮಾರ್ಗ ಸ್ವೀಕರಿಸುವವರು ಎಂದು ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಚಿನ್ನಜೀಯರ್ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಮೈ ಹೋಮ್ ಗ್ರೂಪ್ ಚೇರ್ಮನ್ ಡಾ. ರಾಮೇಶ್ವರ್ ರಾವ್ ಬಗ್ಗೆ ಚಿನ್ನಜೀಯರ್ ಶ್ರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಾಮೇಶ್ವರ್ ರಾವ್ ಸೇವೆಯನ್ನು ಚಿನ್ನಜೀಯರ್ ಶ್ರೀ ಕೊಂಡಾಡಿದ್ದಾರೆ.
ಇದನ್ನೂ ಓದಿ: ಜಾತಿ ವ್ಯವಸ್ಥೆ ತೊಡೆದುಹಾಕಿದ ಸಂತ ರಾಮಾನುಜಾಚಾರ್ಯ; ಅವರ ಜ್ಞಾನ ಇಡೀ ವಿಶ್ವಕ್ಕೇ ವ್ಯಾಪಿಸಲಿ: ಪ್ರಧಾನಿ ಮೋದಿ
ಇದನ್ನೂ ಓದಿ: Statue of Equality: ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಲೋಕಾರ್ಪಣೆ; ಫೋಟೊಗಳು ಇಲ್ಲಿವೆ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
