‘ಕುಟುಂಬದಿಂದ ದೂರ ಇರಬೇಕು, ಇಲ್ಲದಿದ್ರೆ ಒಳಿತಾಗಲ್ಲ’; ಪ್ರತಾಪ್​ಗೆ ಗುರೂಜಿ ಹಿತವಚನ

‘ಕುಟುಂಬದಿಂದ ದೂರ ಇರಬೇಕು, ಇಲ್ಲದಿದ್ರೆ ಒಳಿತಾಗಲ್ಲ’; ಪ್ರತಾಪ್​ಗೆ ಗುರೂಜಿ ಹಿತವಚನ

ರಾಜೇಶ್ ದುಗ್ಗುಮನೆ
|

Updated on: Jan 02, 2024 | 8:54 AM

‘ಕುಟುಂಬದಿಂದ ದೂರ ಇರಬೇಕು. ಕುಟುಂಬ ಜೀವನ ನಿನಗೆ ಸರಿ ಹೊಂದಲ್ಲ. ದೂರ ಇದ್ದು ಧೂಪ ಆಗ್ತಿಯೋ, ಹತ್ತಿರ ಇದ್ದು ಹೇಸಿಗೆ ಆಗ್ತಿಯೋ ನಿನಗೆ ಬಿಟ್ಟಿದ್ದು’ ಎಂದು ಡ್ರೋನ್ ಪ್ರತಾಪ್​ಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದರು.

ಬಿಗ್ ಬಾಸ್ ಮನೆಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರ ಆಗಮನ ಆಗಿದೆ. ಅವರು ಸ್ಪರ್ಧಿಗಳ ಎದುರು ಕುಳಿತು ಭವಿಷ್ಯ ಹೇಳಿದ್ದಾರೆ. ವರ್ತೂರು ಸಂತೋಷ್ ಅವರ ತೊಡೆಯ ಮೇಲೆ ಟ್ಯಾಟೂ ಇದೆ. ಇದರಿಂದಲೇ ಎಲ್ಲವೂ ಕೆಟ್ಟದಾಗುತ್ತಿದೆ ಎಂದು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ್ದಾರೆ. ಮತ್ತೊಂದು ಶಾಕಿಂಗ್ ಭವಿಷ್ಯವನ್ನು ಅವರು ನುಡಿದಿದ್ದಾರೆ. ಪ್ರತಾಪ್ (Prathap) ಕುಟುಂಬದ ಜೊತೆ ಮತ್ತೆ ಸೇರಿದ್ದಾರೆ. ಆದರೆ, ಕುಟುಂಬದಿಂದ ದೂರ ಇರಬೇಕು ಎಂದು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ್ದಾರೆ. ‘ಕುಟುಂಬದಿಂದ ದೂರ ಇರಬೇಕು. ಕುಟುಂಬ ಜೀವನ ನಿನಗೆ ಸರಿ ಹೊಂದಲ್ಲ. ದೂರ ಇದ್ದು ಧೂಪ ಆಗ್ತಿಯೋ, ಹತ್ತಿರ ಇದ್ದು ಹೇಸಿಗೆ ಆಗ್ತಿಯೋ ನಿನಗೆ ಬಿಟ್ಟಿದ್ದು’ ಎಂದರು ಅವರು. ಇದನ್ನು ಕೇಳಿ ಅವರು ಶಾಕ್ ಆದರು. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ