ಸೋನೆಮಳೆಯಲ್ಲೂ ಪ್ರೀ-ವೆಡ್ಡಿಂಗ್ ಫೋಟೋಶೂಟ್​ಗಾಗಿ ವಿಧಾನಸೌಧಕ್ಕೆ ಬಂದ ಜೋಡಿಗಳು!

ಅರುಣ್​ ಕುಮಾರ್​ ಬೆಳ್ಳಿ

Updated on: Oct 14, 2024 | 11:10 AM

ಇದೊಂದೇ ಜೋಡಿಯಲ್ಲ, ಮದುವೆಯಾಗಲಿರುವ ಮತ್ತೊಂದು ಜೋಡಿಯೂ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಗಾಗಿ ಇದೇ ಜಾಗಕ್ಕೆ ಬಂದಿದೆ. ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿರುವ ಜೋಡಿಯನ್ನು ವಿಧಾನಸೌಧ ಎದುರುಗಡೆಯ ಹೈಕೋರ್ಟ್ ಮುಂದೆ ನೋಡಬಹುದು. ಎಲ್ಲ ಜೋಡಿಗಳಿಗೆ ಶುಭವಾಗಲಿ.

ಬೆಂಗಳೂರು: ಇವತ್ತಿನ ಜಮನಾದ ಮದುವೆಗಳು ಒಂದ್ಹೊತ್ತಿಗೆ ಪುರೋಹಿತರಿಲ್ಲದೆ ನಡೆದಾವು ಆದರೆ ಪ್ರೀ-ವೆಡ್ಡಿಂಗ್ ಶೂಟ್ ಇಲ್ಲದೆ ಸಾಧ್ಯವೇ ಇಲ್ಲ! ಇಲ್ನೋಡಿ ಬೆಂಗಳೂರು ನಗರದಲ್ಲಿ ಇಂದು ಬೆಳಗ್ಗೆಯಿಂದಲೇ ಜಿಟಿಜಿಟಿ ಮಳೆ ಅದರೆ ಮದುವೆವಯಾಗಲಿರುವ ಯುವಜೋಡಿಗೆ ಫೋಟೋಶೂಟ್ ಮಾಡಿಸುವ ಉಮ್ಮೇದಿ. ಮಳೆಯಲ್ಲಿ ಇಬ್ಬರೂ ನೆನೆಯುತ್ತಿದ್ದಾರೆ, ಅವರೊಂದಿಗೆ ವಿಡಿಯೋಗ್ರಾಫರ್ ಸಹ. ಫೋಟೋಶೂಟ್ ಗೆ ಅವರು ವಿಧಾನಸೌಧವನ್ನು ಆಯ್ದುಕೊಂಡಿರುವುದು ಅಚ್ಚರಿ ಮೂಡಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರೀ-ವೆಡ್ಡಿಂಗ್ ಫೋಟೋ ಶೂಟ್​​ನಲ್ಲಿ ಮಿಂಚಿದ ಕನ್ನಡದ ಕಿರುತೆರೆ ನಟಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.