Video: ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ

Updated on: Dec 31, 2025 | 7:40 PM

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ ಮಾಡಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಕಾರವಾರದಿಂದ ಅಂಕೋಲಾ ಕಡೆಗೆ ಹೊಗುತ್ತಿದ್ದ ಬಸ್ಸಿನಲ್ಲಿ ನಡೆದಿದೆ. ಯುವತಿ ಬಸ್​​​​​​ನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಪಕ್ಕದಲ್ಲಿ ಕುಳಿತ ಯುವಕ ಎದೆ ಮೇಲೆ ಕೈ ಇಟ್ಟು ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ನಿದ್ದೆಯಿಂದ ಎಚ್ಚರಗೊಂಡು ನೋಡಿದಾಗ, ಕೈ ಆಕೆಯ ಎದೆ ಮೇಲಿತ್ತು.

ಕಾರವಾರ, ಡಿ.31: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ ಮಾಡಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಕಾರವಾರದಿಂದ ಅಂಕೋಲಾ ಕಡೆಗೆ ಹೊಗುತ್ತಿದ್ದ ಬಸ್ಸಿನಲ್ಲಿ ನಡೆದಿದೆ. ಯುವತಿ ಬಸ್​​​​​​ನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಪಕ್ಕದಲ್ಲಿ ಕುಳಿತ ಯುವಕ ಎದೆ ಮೇಲೆ ಕೈ ಇಟ್ಟು ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ನಿದ್ದೆಯಿಂದ ಎಚ್ಚರಗೊಂಡು ನೋಡಿದಾಗ, ಕೈ ಆಕೆಯ ಎದೆ ಮೇಲಿತ್ತು. ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾಳೆ. ಇನ್ನು ಯುವಕನಿಗೆ ಅವಾಚ್ಯ ಶಬ್ದಗಳಿಂದ ಉಗಿದು, ಧರ್ಮದೇಟು ನೀಡಿದ್ದಾಳೆ. ಈ ವಿಡಿಯೋ ಪೊಲೀಸರಿಗೂ ಟ್ಯಾಗ್​ ಮಾಡಿದ್ದಾಳೆ. ಈ ವಿಡಿಯೋ ಮೂಲಕ ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕೆಂದು ಸಂದೇಶ ನೀಡಿದ್ದಾಳೆ. ಇದೀಗ ಅಂಕೋಲಾ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ವಿಡಿಯೋ ಆಧಾರದ ಮೇಲೆ ದೂರು ದಾಖಲಿಸಿಕೊಂಡು ಯುವಕ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ಎಸ್ಪಿ ದೀಪನ್ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ